×
Ad

ಬೀದರ್-ಕಲಬುರಗಿ ರೈಲು ಹಳಿ ಮೇಲೆ ಬಿದ್ದ ಬಂಡೆ; ತಪ್ಪಿದ ಅನಾಹುತ

Update: 2023-06-12 17:24 IST
Byline : Ashwani

ಕಲಬುರಗಿ : ಕಮಲಾಪುರ ತಾಲೂಕಿನ ಮರಗುತ್ತಿ ಬಳಿಯಿರುವ ಟನಲ್ ನಲ್ಲಿ ಮಳೆಯಿಂದಾಗಿ ದೊಡ್ಡ ಕಲ್ಲು ಬಿದ್ದಿರುವುದರಿಂದ ಕಲಬುರಗಿ- ಬೀದರ್ ರೈಲು ಟನಲ್ ನಲ್ಲಿ ಸಿಕ್ಕಿ ಬಿದ್ದಿದ್ದು, ಭಾರಿ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಇದರಿಂದ ಎರಡು ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು.

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿ ಟನಲ್ ನಲ್ಲೇ ರೈಲು ನಿಂತಿದ್ದು, ಪ್ರಯಾಣಿಕರು ಆತಂಕಗೊಂಡಿದ್ದರು ಎಂದು ಹೇಳಲಾಗಿದೆ.

ಬಳಿಕ ಬಂಡೆ ಕಡಿದು ಪಕ್ಕಕ್ಕೆ ಸರಿಸಿ  ಅದೆ ರೈಲು ಕಲಬುರಗಿಗೆ ತೆರಳಿತು. ಅಷ್ಟರಲ್ಲಾಗಲೇ ಕೆಲ ಪ್ರಯಾಣಿಕರು ಕಾಲ್ನಡಿಗೆ ಮೂಲಕ ಕಮಲಾಪುರಕ್ಕೆ ತೆರಳಿದ್ದರು. ಇನ್ನು ಕೆಲವರು 2 ಗಂಟೆ ಕಾಲ ಕಾಯ್ದು ಅದೇ ರೈಲಿನಲ್ಲಿ ಸಂಚರಿಸಿದರು.

Byline - Ashwani

contributor

Similar News