×
Ad

ಕೋಲಾರ: ಪತಿ-ಪತ್ನಿ ಜಗಳ; ಮಗುವಿನ ಕತ್ತು ಹಿಸುಕಿ ಕೊಂದ ತಂದೆ

Update: 2023-06-14 09:18 IST
Byline : Ashwani

ಕೋಲಾರ: ತಂದೆಯೊಬ್ಬ ತನ್ನ 2 ವರ್ಷದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮುಳಬಾಗಲು ತಾಲ್ಲೂಕಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಆರೋಪಿಯನ್ನು ಕೊತ್ತೂರು ಗ್ರಾಮದ  32 ವರ್ಷದ ಗಂಗಾಧರ್ ಎಂದು ಗುರತಿಸಲಾಗಿದೆ. ಕ್ಷುಲ್ಲುಕ ಕಾರಣಕ್ಕೆ ನಡೆಯುತ್ತಿದ್ದ ಪತಿ ಗಂಗಾಧರ್  ಹಾಗೂ ಪತ್ನಿ ರೇಣುಕಾ ನಡುವಿನ ಗಲಾಟೆಯಲ್ಲಿ 2 ವರ್ಷದ ರಮ್ಯ ಎಂಬ ಪುಟ್ಟ ಕಂದಮ್ಮ ಜೀವಕಳೆದುಕೊಂಡಿದೆ ಎನ್ನಲಾಗಿದೆ.

ಈ ಬಗ್ಗೆ ರೇಣುಕಾ  ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ಪರಿಶೀಲನೆ ನಡೆಸಿದ್ದಾರೆ. 

Byline - Ashwani

contributor

Similar News