×
Ad

ಗದಗ | ನನಗೆ ಮದುವೆಯಾಗಲು ಹೆಣ್ಣು ಹುಡುಕಿ ಕೊಡಿ: ಪಿಡಿಒಗೆ ಪತ್ರ ಬರೆದ ಯುವಕ!

Update: 2023-06-15 23:57 IST
Byline : Ashwani

ಗದಗ: 'ನನಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ‘ಕನ್ಯೆ' ಹುಡುಕಿಕೊಡಬೇಕು’ ಎಂದು ಗುತ್ತಿಗೆದಾರನೋರ್ವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಕೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ವರದಿಯಾಗಿದೆ. 

ಸದ್ಯ ಗುತ್ತಿಗೆದಾರ ಎಸ್‌.ಎನ್‌. ಹೂಗಾರ ಬರೆದಿರುವ ಈ ಮನವಿ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ತಂದೆ ತಾಯಿಗೆ ಒಬ್ಬನೇ ಮಗ. ಗುತ್ತಿಗೆದಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ದಯಾಳುಗಳಾದ ತಾವು ಯಾವುದೇ ಜಾತಿಯ ಕನ್ಯೆಯನ್ನಾದರೂ ಹುಡುಕಿಕೊಡಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

'ತಿಂಗಳಿಗೆ 50 ಸಾವಿರ ರೂಪಾಯಿ ಆದಾಯವಿದ್ದರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ನನಗೆ ಸಹೋದರ, ಸಹೋದರಿ ಯಾರೂ ಇಲ್ಲ. ಪ್ರತಿ ಹಳ್ಳಿ-ಹಳ್ಳಿ ಸುತ್ತಾಡಿ ಕನ್ಯೆ ನೋಡಿದ್ದೇನೆ. ಒಳ್ಳೆಯ ಆದಾಯವಿದೆ, ಆದರೆ ಸರ್ಕಾರಿ ಉದ್ಯೋಗ ಇಲ್ಲವೆಂದು ಯಾರೂ ಹೆಣ್ಣು ಕೊಡುತ್ತಿಲ್ಲ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

Byline - Ashwani

contributor

Similar News