ಒಂದೇ ತಿಂಗಳಲ್ಲಿ ಐದು ಲಕ್ಷ ಪ್ರವಾಸಿಗಳನ್ನು ಆಕರ್ಷಿಸಿದ ಕರ್ನಾಟಕದ ತಾಣ ಇದು..

Update: 2023-01-01 03:49 GMT

ಮೈಸೂರು: ಶಾಲೆಗಳ ಶೈಕ್ಷಣಿಕ ಪ್ರವಾಸದ ಕಾರಣದಿಂದ ಡಿಸೆಂಬರ್ ತಿಂಗಳ 30 ದಿನಗಳ ಅವಧಿಯಲ್ಲಿ ವಿಶ್ವವಿಖ್ಯಾತ ಮೈಸೂರು ಅರಮನೆ ಐದು ಲಕ್ಷಕ್ಕೂ ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸಿದೆ. ಈ ಮೂಲಕ 2020ರ ಎಪ್ರಿಲ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಈ ಆಕರ್ಷಕ ತಾಣ ಗರಿಷ್ಠ ವೀಕ್ಷಕರನ್ನು ಸೆಳೆದಿದೆ ಎಂದು timesofindia ವರದಿ ಮಾಡಿದೆ.

ಡಿಸೆಂಬರ್ ತಿಂಗಳ 1ರಿಂದ 30ರ ವರೆಗೆ 5,12,656 ಮಂದಿ ಪ್ರವಾಸಿಗಳು ಮೈಸೂರು ಅರಮನೆ ವೀಕ್ಷಿಸಿದ್ದಾರೆ. ಈ ಪೈಕಿ 2,19,440 ಮಂದಿ ವಿದ್ಯಾರ್ಥಿಗಳು ಹಾಗೂ 2,55,988 ಮಂದಿ ವಯಸ್ಕರು. 2,378 ಮಂದಿ ವಿದೇಶಿಯರು ಹಾಗೂ 34,850 ಮಕ್ಕಳು ಸೇರಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.

ನವೆಂಬರ್ ತಿಂಗಳಲ್ಲಿ 1,94,728 ಮಂದಿ ವಯಸ್ಕರು ಹಾಊ 59,975 ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದರು. ಕೋವಿಡ್-19 ಸಾಂಕ್ರಾಮಿಕದ ಬಳಿಕ 2022ರ ಅಕ್ಟೋಬರ್‌ನಲ್ಲಿ ಗರಿಷ್ಠ ಅಂದರೆ 4,11,709 ಪ್ರವಾಸಿಗಳು ಅರಮನೆಗೆ ಭೇಟಿ ನೀಡಿದ್ದರು. ಇವರಲ್ಲಿ 3,34,259 ಮಂದಿ ವಯಸ್ಕರು, 1474 ಮಂದಿ ವಿದೇಶೀಯರು, 2,58,768 ವಿದ್ಯಾರ್ಥಿಗಳು ಹಾಗೂ 50,098 ಮಕ್ಕಳು ಸೇರಿದ್ದಾರೆ.

ವರ್ಷಾಂತ್ಯದ ಸಮಯದಲ್ಲಿ ಹೆಚ್ಚಿನ ಪ್ರವಾಸಿಗಳು ಪ್ರತಿ ವರ್ಷವೂ ಆಗಮಿಸುತ್ತಾರೆ ಎಂದು ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹೇಳುತ್ತಾರೆ.

ಈ ವರ್ಷ ಶಾಲಾ ಶೈಕ್ಷಣಿಕ ಪ್ರವಾಸಗಳಿಗೆ ಡಿಸೆಂಬರ್ 31 ಕೊನೆಯ ದಿನವಾಗಿದ್ದರಿಂದ, ಪ್ರತಿ ದಿನ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಪ್ರತಿದಿನ 25 ಸಾವಿರ ವೀಕ್ಷಕರು ಆಗಮಿಸಿದರೆ, ಈ ಪೈಕಿ 7 ರಿಂದ 8 ಸಾವಿರ ಮಂದಿ ವಿದ್ಯಾರ್ಥಿಗಳು. ಕೇರಳದಿಂದ ಕೂಡಾ ದೊಡ್ಡ ಸಂಖ್ಯೆಯ ವೀಕ್ಷಕರು ಆಗಮಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Similar News