ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2023-01-02 17:16 IST
ಬೆಂಗಳೂರು, ಜ. 2: ಎರಡು ದಿನದ ಹಿಂದೆ 53 ಐಪಿಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಿಸುವುದರೊಂದಿಗೆ ಭಡ್ತಿಯನ್ನು ನೀಡಿದ್ದ ರಾಜ್ಯ ಸರಕಾರ ಇದೀಗ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಕೆಲವು ತಿಂಗಳಿಂದ ಸರಕಾರ ಪೊಲೀಸ್ ಇಲಾಖೆಯಲ್ಲಿ ಸರಣಿ ವರ್ಗಾವಣೆಯನ್ನು ಮಾಡುತ್ತಿದ್ದು, ಈ ಹಿಂದೆ ಹಲವು ಪೊಲೀಸ್ ಇನ್ಪೆಕ್ಟರ್‍ಗಳನ್ನು ಮತ್ತು ಡಿಜಿಪಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ಬೆಳಗಾವಿಗೆ ವರ್ಗ: ಉತ್ತರ ವಲಯದ ಐಜಿಪಿಯಾಗಿ ಎನ್.ಸತೀಶ್ ಕುಮಾರ್, ಗುಪ್ತಚರ ವಿಭಾಗದ ಐಜಿಪಿಯಾಗಿ ಲಾಬುರಾಮ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಡಿಐಜಿ ರಮಣಗುಪ್ತಾ, ಆಗ್ನೇಯ ವಲಯ ಡಿಐಜಿಯಾಗಿ ಅನುಪಮ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.