ಭೂತದ ಎದೆಹಾಲು ಕುಡಿದು ಬೆಳೆದ ಬಾಲೆ ನಾನು; ಅದು ಪೊರೆವ ಭೂತ!

Update: 2023-01-04 06:04 GMT

ಡಾ. ಇಂದಿರಾ ಹೆಗ್ಗಡೆ

ಸಮಾಜಮುಖಿ ಚಿಂತಕಿ ಡಾ. ಇಂದಿರಾ ಹೆಗ್ಗಡೆ ಸಾಹಿತಿ-ಸಂಶೋಧಕಿಯಾಗಿ ಗುರುತಿಸಿಕೊಂಡಿದ್ದಾರೆ.  ಅವರು ಸಣ್ಣ ಕಥೆಗಳನ್ನು ಬರೆಯುವ ಮೂಲಕ ತಮ್ಮ 33ನೆಯ ವಯಸಿನಲ್ಲಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೂರು ಕಥಾ ಸಂಕಲನಗಳನ್ನು, ನಾಲ್ಕು ಕಾದಂಬರಿಗಳನ್ನು, ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಎಂಬ ಅನುಭವ ಕಥನವನ್ನು ತಮ್ಮ ಪತಿ ಎಸ್. ಆರ್.ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ಎಸ್.ಆರ್. ಹೆಗ್ಡೆಯವರ ಕುರಿತಾಗಿ ‘ನಾಡಿಗೆ ನಮಸ್ಕಾರ ಮಾಲೆ’ಗಾಗಿ ಕೃತಿ ರಚಿಸಿಕೊಟ್ಟಿದ್ದಾರೆ.. ‘ಬಂಟರು: ಒಂದು ಸಮಾಜೋ ಸಾಂಸ್ಕತಿಕ ಅಧ್ಯಯನ’ ಇವರಿಗೆ ಬಹಳ ಹೆಸರು ತಂದ ಕೃತಿ. ಅವರ ಡಿ.ಲಿಟ್. ಸಂಪ್ರಬಂಧ ‘ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ’. ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಇವರು ಹಲವು ಪ್ರಶಸ್ತಿ, ಸನ್ಮಾನ, ಗೌರವಗಳಿಂದ ಅಲಂಕೃತರು.

ನಾನು ಜನಿಸಿದ್ದು ಬೆಳೆದುದು ಬಾಗಿಲೇ ಇಲ್ಲದ ತೆರೆದ ಚಾವಡಿಯ ಗುತ್ತು ಮನೆಯಲ್ಲಿ. ಚ