×
Ad

ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲು

Update: 2023-01-03 13:37 IST

ರಾಣೆಬೆನ್ನೂರು, ಜ.3:  ಈಜಲು ಹೋಗಿದ್ದ ಮೂವರು ಯುವಕರು ತುಂಗಾಭದ್ರಾ ನದಿಯಲ್ಲಿ ನೀರುಪಾಲಾದ ಘಟನೆ ಹಾವೇರಿ ಜಿಲ್ಲಾಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ಸೋಮವಾರ ವರದಿಯಾಗಿದೆ. 

ಹೊಸವರ್ಷದ ನಿಮಿತ್ತ ಆಚರಣೆಗೆಂದು ತೆರಳಿದ್ದ  ಈ ಯುವಕರು ಈಜು ಬಾರದೆ ನೀರುಪಾಲಾಗಿದ್ದಾರೆನ್ನಲಾಗಿದೆ. ಈ ಮೂವರ ಗುರುತು ಪತ್ತೆಹಚ್ಚಿದ್ದು, ನವೀನ್ ಕುರಗುಂದ (20 ), ವಿಕಾಸ ಪಾಟೀಲ್ (20), ಹಾಗೂ ನೆಪಾಳದ ಮೂಲದ ಪ್ರೇಮ್ ಬೋರಾ (25) ನೀರುಪಾಲಾದ ಯುವಕರು  ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಪೋಲಿಸರಿಂದ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಈಗಾಗಲೇ ವಿಕಾಸ ಎಂಬವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Similar News