×
Ad

ನನ್ನಂತೆ ರಾಜಕೀಯಕ್ಕೆ ಕುಟುಂಬದವರನ್ನು ಕರೆತರದಿರಲು ನಿಮ್ಮಿಂದ ಸಾಧ್ಯವೇ?: ಎಚ್​ಡಿಕೆಗೆ ಪ್ರಹ್ಲಾದ್​ ಜೋಶಿ ಸವಾಲು

Update: 2023-01-03 16:42 IST

ಗದಗ, ಜ.3: 'ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು. ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಅದರಂತೆಯೇ ಕುಮಾರಸ್ವಾಮಿ ಅವರು ಹೇಳಲಿ' ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸವಾಲು ಹಾಕಿದ್ದಾರೆ. 

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂತ ಬಂದಾಗ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್, ನಿಖಿಲ್, ಭವಾನಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಇವರಷ್ಟೇ ಒಂದು ಪಕ್ಷನಾ? ಎಂದು ಪ್ರಶ್ನಿಸಿದರು.

''ಪಕ್ಷ ಅಂದ್ರೆನೇ ಇವರೇ ನಾ? ಇದರಲ್ಲೇ ಭ್ರಷ್ಟಾಚಾರ ಇದೆ ಅನ್ನೋದು ಗೊತ್ತಾಗುತ್ತದೆ'' ಎಂದು ಕುಮಾರಸ್ವಾಮಿ ವಿರುದ್ಧ ಪ್ರಹ್ಲಾದ್​ ಜೋಶಿ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ... ಅಮಿತ್ ಶಾ ದೇವೇಗೌಡರ ಕಾಲಿನ ಉಗುರಿಗೂ ಸಮಾನರಲ್ಲ: ಎಚ್.ಡಿ.ಕುಮಾರಸ್ವಾಮಿ

Similar News