ರಂಗಾಯಣ ನಿರ್ದೇಶಕರನ್ನು ವಜಾಗೊಳಿಸುವಂತೆ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಆಗ್ರಹ
ಬೆಂಗಳೂರು, ಜ.3: ಚುನಾವಣಾ ಸಂದರ್ಭದಲ್ಲಿ ಎಲ್ಲ ರೀತಿಯಲ್ಲೂ ದ್ವೇಷಕಾರಲು ಹೊರಟಿರುವ ಸರಕಾರವು ನಾಟಕದ ಮೂಲಕ ಪಕ್ಷದ ಚುನಾವಣಾ ಪ್ರಚಾರ ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಕಲೆಯನ್ನು ಬಿಟ್ಟು ದ್ವೇಷವನ್ನು ಹರಡಲು ರಂಗಾಯಣವನ್ನು ಬಳಸಿಕೊಳ್ಳುತ್ತಿರುವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಾಂಬಶಿವ ಪ್ರಹಸನದಂತಹ ಕಲಾತ್ಮಕ ನಾಟಕದಲ್ಲಿ ದುರುದ್ದೇಶದಿಂದ ‘ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ’ ಎಂದು ವಿಪಕ್ಷೀಯ ನಾಯಕರನ್ನು ವಿಕೃತಿಯಿಂದ ಅಣಕಿಸಲು ಪ್ರಯತ್ನಿಸಲಾಗಿದ್ದು ಹೀನ ತಿಳುವಳಿಕೆಯನ್ನು ನಾಟಕಗಳಲ್ಲಿ ತುರುಕಲಾಗುತ್ತಿದ್ದು ಇದು ರಂಗಭೂಮಿಯ ಆಶಯಗಳಿಗೆ ವಿರುದ್ಧವಾದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಸಾಂಬಶಿವ ಪ್ರಹಸನದಂತಹ ಕಲಾತ್ಮಕ ನಾಟಕದಲ್ಲಿ ದುರುದ್ದೇಶದಿಂದ "ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ" ಎಂದು ವಿಪಕ್ಷೀಯ ನಾಯಕರನ್ನು ವಿಕೃತಿಯಿಂದ ಅಣಕಿಸಲು ಪ್ರಯತ್ನಿಸಲಾಗಿದ್ದು ಹೀನ ತಿಳುವಳಿಕೆಯನ್ನು ನಾಟಕಗಳಲ್ಲಿ ತುರುಕಲಾಗುತ್ತಿದ್ದು ಇದು ರಂಗಭೂಮಿಯ ಆಶಯಗಳಿಗೆ ವಿರುದ್ಧವಾದ ಸಂಗತಿಯಾಗಿದೆ
— Dr H.C.Mahadevappa (@CMahadevappa) January 3, 2023
1/2