ಎಸ್‍ಡಿಪಿಐ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಅಫ್ಸರ್ ಕೊಡ್ಲಿಪೇಟೆ ಆಯ್ಕೆ

Update: 2023-01-03 16:42 GMT

ಬೆಂಗಳೂರು, ಜ.3: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ)ನ ಚುನಾವಣಾ ರಾಜ್ಯ ಉಸ್ತುವಾರಿಯಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಜ.1ರಂದು ನಗರದಲ್ಲಿ ಆಯೋಜಿಸಿದ್ದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಚುನಾವಣೆಯ ಎಲ್ಲ ತಯಾರಿಗಳು ನೂತನ ಉಸ್ತುವಾರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಎಸ್‍ಡಿಪಿಐ ಪ್ರಕಟನೆ ತಿಳಿಸಿದೆ. 

Similar News