ಭಾರತ್ ಜೋಡೊ ಯಾತ್ರೆಯಲ್ಲಿ ಜೊತೆಯಾದವರಿಗೆ ಕಾಂಗ್ರೆಸ್ ಆಭಾರಿ: ಸಿದ್ದರಾಮಯ್ಯ

Update: 2023-01-03 18:21 GMT

ಹೊಸದಿಲ್ಲಿ,ಜ.3: ಒಂಭತ್ತು ದಿನಗಳ ವಿರಾಮದ ಬಳಿಕ ಕಾಂಗ್ರೆಸ್ನ ಭಾರತ ಜೋಡೊ ಯಾತ್ರೆ ಮಂಗಳವಾರ ಇಲ್ಲಿ ಪುನರಾರಂಭಗೊಂಡಿದ್ದು,ಸಂಶೋಧನಾ ಮತ್ತು ವಿಶ್ಲೇಷಣಾ ಘಟಕ (ರಾ)ದ ಮಾಜಿ ಮುಖ್ಯಸ್ಥ ಎ.ಎಸ್.ದುಲತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದರು.

ಜ.2000ರಿಂದ ಮೇ 2004ರವರೆಗೆ ಪ್ರಧಾನಿ ಕಚೇರಿಯಲ್ಲಿ ಜಮ್ಮು-ಕಾಶ್ಮೀರ ಕುರಿತು ಸಲಹೆಗಾರರಾಗಿದ್ದ ದುಲತ್ ಭಾರತ ಜೋಡೊ ಯಾತ್ರೆ ಉತ್ತರ ಪ್ರದೇಶವನ್ನು ಪ್ರವೇಶಿಸುವ ಮುನ್ನ ರಾಹುಲ್ರನ್ನು ಸೇರಿಕೊಂಡರು. ಶಿವಸೇನೆ (ಠಾಕ್ರೆ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಮಧ್ಯಾಹ್ನ ಯಾತ್ರೆಯು ಲೋನಿ ಗಡಿಯನ್ನು ತಲುಪುತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಕಾರ್ಯಕರ್ತರು ಅದನ್ನು ಸ್ವಾಗತಿಸಿದರು.ಈಗಾಗಲೇ ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ 3,122 ಕಿ.ಮೀ.ಪಯಣವನ್ನು ಪೂರ್ಣಗೊಳಿಸಿರುವ ಭಾರತ ಜೋಡೊ ಯಾತ್ರೆಯು ಉತ್ತರ ಪ್ರದೇಶದಿಂದ ಹರ್ಯಾಣ,ಪಂಜಾಬ ಮತ್ತು ಹಿಮಾಚಲ ಪ್ರದೇಶ ಮೂಲಕ ಸಾಗಿ ಜ.30ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜದ ಆರೋಹಣದೊಂದಿಗೆ ಅಂತ್ಯಗೊಳ್ಳಲಿದೆ.

 ಕಾಂಗ್ರೆಸ್ ಪಕ್ಷವೀಗ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಎರಡು ತಿಂಗಳುಗಳ ಕಾಲ ದೇಶಾದ್ಯಂತ ‘ಹಾಥ್ ಸೆ ಹಾಥ್ ಜೋಡೊ ’ಅಭಿಯಾನಕ್ಕೆ ಸಜ್ಜಾಗುತ್ತಿದೆ. ಭಾರತ ಜೋಡೊ ಯಾತ್ರೆಯ ಸಂದೇಶವನ್ನು ಹರಡಲು ಪ್ರಿಯಾಂಕಾ ಪ್ರತಿ ರಾಜ್ಯದ ರಾಜಧಾನಿಯಲ್ಲಿ ಮಹಿಳಾ ಕಾರ್ಯಕರ್ತರ ಜೊತೆಗೆ ಪಾದಯಾತ್ರೆಗಳು ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ತಿಳಿಸಿದರು.

Similar News