ಹಾಸನ | ಮಿಕ್ಸಿ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ

Update: 2023-01-04 05:26 GMT

ಹಾಸನ, ಜ.4: ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದ ಕೋರಿಯರ್ ಅಂಗಡಿಯಲ್ಲಿ ಸಂಭವಿಸಿದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅನೂಪ್ ಕುಮಾರ್(42)ನನ್ನು ಪೊಲೀಸರು ಬಂಧಿಸಿದ್ದಾರೆ.

ಅನೂಪ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು, ಜ.7ರವರೆಗೆ ಪ್ರಕರಣ ಕುರಿತು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಅನೂಪ್ ಕುಮಾರ್ ನನ್ನು ಬಂಧಿಸಲಾಗಿದ್ದು ಮಿಕ್ಸಿ ಯಲ್ಲಿ ಡೆಟೋನೇಟರ್ ಅಳವಡಿಸಲು ಈತನಿಗೆ ಸಹಕರಿಸಿದವರು ಯಾರು, ಡೆಟೋನೇಟರ್ ಸರಬರಾಜು ಮಾಡಿದವರು ಯಾರು, ಕೇಂದ್ರ ಕೊರಿಯರ್ ನಲ್ಲಿ ಸ್ಕ್ಯಾನ್ ಮಾಡದೆ ಮಿಕ್ಸಿ ಹಾಸನಕ್ಕೆ ತಲುಪಿದ್ದು ಹೇಗೆ ಹಾಗೂ ಇದಕ್ಕೆ ಸಹಕಾರ ನೀಡಿದವರು ಯಾರೆಂಬುದರ ಬಗ್ಗೆ ಅನೂಪ್ ವಿಚಾರಣೆಯಿಂದ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News