×
Ad

ಟ್ವಿಟರ್ ಖಾತೆ ಅಮಾನತುಗೊಂಡಿರುವುದಕ್ಕೆ ಕಾರಣ ತಿಳಿಸಿದ ನಟ ಕಿಶೋರ್

Update: 2023-01-04 16:34 IST

ಬೆಂಗಳೂರು: ಯಾವುದೇ ಕಾರಣ ತಿಳಿಸದೇ ನಟ ಕಿಶೋರ್ ಅವರ ಟ್ವಿಟರ್ ಖಾತೆ ಅಮಾನತಿಗೆ ಒಳಗಾಗಿದ್ದು, ಈ ಬಗ್ಗೆ ಖುದ್ದು ಕಿಶೋರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. 

ಅವರ ಅಧಿಕೃತ @actorkishore ಅಕೌಂಟ್ ನಾಪತ್ತೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಅವರ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಇದೀಗ ಫೇಸ್ ಬುಕ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ನಟ ಕಿಶೋರ್, ''ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20 ನೇತಾರೀಖು 2022 ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು'' ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: 'ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು' ಎಂಬ ವಾಟ್ಸಾಪ್‌ ಸಂದೇಶದ ಕುರಿತು ನಟ ಕಿಶೋರ್‌ ಹೇಳಿದ್ದೇನು?

Full View

Similar News