ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗೆ ಆಪ್ತನಿಂದಲೇ ಅರ್ಜಿ: ಸಿ.ಟಿ.ರವಿ ಪ್ರತಿಕ್ರಿಯೆ ಏನು?

Update: 2023-01-04 15:04 GMT

ಚಿಕ್ಕಮಗಳೂರು, ಜ.4: ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಟಿಕೆಟ್ ಬಯಸಿ ಮನವಿ ಮಾಡಿರುವ ಬಗ್ಗೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.  

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಆಕಾಶ ನೋಡಲು ನೂಕುನುಗ್ಗಲು ಮಾಡಬೇಕೇ? ಟಿಕೆಟ್‍ನ್ನು ಎಲ್ಲಾ ಕಾರ್ಯಕರ್ತರು ಕೇಳಬಹುದು ಅದಕ್ಕೆ ಅವಕಾಶವಿದೆ. ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶವಿದೆ. ಅದರಲ್ಲಿ ತಪ್ಪಿಲ್ಲ'' ಎಂದರು. 

''ಅವರು ಕೇಳುವ ಮುಂಚೆ ನನಗೂ ತಿಳಿಸಿದ್ದರು. ನಾನು ಸಮ್ಮತಿಸಿದ್ದೆ ಎಂದ ಅವರು, ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷ ನಿರ್ಧಾರ ಮಾಡುತ್ತದೆ. 1994 ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಟಿಕೆಟ್ ಕೇಳಿಲ್ಲ. ಪಕ್ಷದ ಅಪೇಕ್ಷೆ ಮೇರೆಗೆ ಮಂತ್ರಿಗಿರಿಯನ್ನೇ ಬಿಟ್ಟಿದ್ದೇನೆ. ಪಾರ್ಟಿ ನಿರ್ಣಯವನ್ನು ಪಾಲಿಸುತ್ತೇನೆ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶವಿದೆ'' ಎಂದರು.

ಮಾಜಿಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚುನಾವಣಾ ರಾಜಕೀಯದಿಂದ ದೂರವಿದ್ದು, ಅವರು ಅನುಭವಿ, ಮುತ್ಸದ್ಧಿ ರಾಜಕಾರಣಿಯಾಗಿದ್ದು, ಅವರು ಮಾರ್ಗದರ್ಶನ ಮಾಡುತ್ತಾರೆ. ನಿವೃತ್ತಿ ಬಗ್ಗೆ ನನಗೆ ತಿಳಿದಿಲ್ಲ ಎಂದು ಇದೇ ವೇಳೆ ಸಿ.ಟಿ.ರವಿ ಹೇಳಿದರು.

Similar News