×
Ad

ಕರಕುಶಲ ಗ್ರಾಮ ಸ್ಥಾಪನೆಗೆ ಕಾಂಗ್ರೆಸ್ ನಾಯಕರ ಬೆಂಬಲ ಕೋರಿದ ಬಿಜೆಪಿ ಸಂಸದ ಲೆಹರ್ ಸಿಂಗ್

Update: 2023-01-04 20:56 IST

ಬೆಂಗಳೂರು, ಜ.4: ಚನ್ನಪಟ್ಟಣದ ಕರಕುಶಲ ಆಟಿಕೆಗಳ ಕುಶಲಕರ್ಮಿಗಳ ರಕ್ಷಣೆಗಾಗಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಕರಕುಶಲ ಗ್ರಾಮವನ್ನು ಸ್ಥಾಪಿಸುವ ಆಲೋಚನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ಬೆಂಬಲ ಹಾಗೂ ಸಹಕಾರ ಕೋರಿದರು.

ಎಕ್ಸ್ ಪ್ರೆಸ್ ವೇ ಕಾರ್ಯಾರಂಭಗೊಂಡ ನಂತರ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿರುವ ಮದ್ದೂರು ವಡೆ, ಬಿಡದಿ ತಟ್ಟೆ ಇಡ್ಲಿ ಇತ್ಯಾದಿ ಸ್ಥಳೀಯ ಖಾದ್ಯ ವೈವಿಧ್ಯಗಳನ್ನು ಇಲ್ಲಿ ಗ್ರಾಹಕರಿಗೆ ಒದಗಿಸಬಹುದು ಎನ್ನುವುದು ಲೆಹರ್ ಸಿಂಗ್ ಒತ್ತಾಯವಾಗಿದೆ. ಇಬ್ಬರೂ ಕಾಂಗ್ರೆಸ್ ನಾಯಕರು ಕರಕುಶಲ ಗ್ರಾಮ ಪರಿಕಲ್ಪನೆಗೆ ಬೆಂಬಲದ ಭರವಸೆ ನೀಡಿದರು.

ಈ ನಿಟ್ಟಿನಲ್ಲಿ ಲೆಹರ್ ಸಿಂಗ್ ಶೀಘ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಹಕಾರ ಕೋರಲಿದ್ದಾರೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಬೆಂಗಳೂರು-ಮೈಸೂರು ದಶಪಥ ಎಕ್ಸ್ ಪ್ರೆಸ್ ವೇ ಪರಿಶೀಲನೆಗೂ ಮುನ್ನ ಈ ಸಭೆ ನಡೆದಿದೆ ಎಂದು ಪ್ರಕಟನೆ ತಿಳಿಸಿದೆ.

Similar News