ಸಾಗರ | ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

Update: 2023-01-04 16:55 GMT

ಸಾಗರ, ಜ.4 : ತಾಲೂಕಿನ ಆನಂದಪುರ ಸಮೀಪದ ಕಣ್ಣೂರು ಬಳಿ ನಿಂತಿದ್ದ ಲಾರಿಯೊಂದ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.

ಮೃತರನ್ನು ಗೌತಮಪುರ ನಿವಾಸಿಗಳಾದ ಪ್ರದೀಪ್ (25), ಹಾಗೂ ದಯಾನಂದ (30) ಎಂದು ಗುರುತಿಸಲಾಗಿದೆ. 

ಆನಂದಪುರದಿಂದ ಸಂತೆ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ  ಕಣ್ಣೂರು ಸಮೀಪ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Similar News