ಮುಂಡಗೋಡ: ಬೈಕ್ ಗೆ ಗುದ್ದಿದ ಸ್ಕಾರ್ಫೀಯೊ ವಾಹನ ಬೈಕ್ ಸವಾರ ಸ್ಥಳದಲ್ಲಿಯೇ ಸಾವು
Update: 2023-01-04 22:19 IST
ಮುಂಡಗೋಡ: ಬೈಕ್ ಮತ್ತು ಸ್ಕಾರ್ಪಿಯೋ ವಾಹನದ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆ ದೇಶಪಾಂಡ ರುಡ್‍ಸೆಟಿ ಕಚೇರಿಯ ಹತ್ತಿರ ಬುಧವಾರ ಸಂಭವಿಸಿದೆ.
ಮೃತಪಟ್ಟ ಯುವಕನನ್ನು ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಂಜುನಾಥ ಇಂಗೋಲೆ(25) ಎಂದು ತಿಳಿದು ಬಂದಿದೆ.
ಸ್ಕಾರ್ಫೀಯೊ ವಾಹನ ಹಾಗೂ ಬೈಕ್ ಶಿರಸಿಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದಾಗ ಸ್ಕಾರ್ಫೀಯೊ ವಾಹನ ಬೈಕ್‍ಗೆ ಹಿಂದಿನಿಂದ ಗುದ್ದಿದ ರಭಸಕ್ಕೆ ಬೈಕ್ ಸವಾರ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಸ್ಕಾರ್ಫೀಯೊ ವಾಹನ ದೇಶಪಾಂಡೆ ರುಡ್‍ಸೆಟಿ ಕಚೇರಿಯ ಕಂಪೌಂಡ ಗೋಡಗೆ ಗುದ್ದಿದ ಪರಿಣಾಮ ಕಂಪೌಂಡ್ ಭಾಗಶಃ ಮುರಿದು ಬಿದ್ದಿರುವುದು ನೋಡಿದರೆ ಸ್ಕಾರ್ಫೀಯೊ ವಾಹನದ ವೇಗ ಎಷ್ಟು ಇತ್ತು ಎಂದು ಅಂದಾಜಿಸ ಬಹುದಾಗಿದೆ ಎಂದು ಘಟನಾಸ್ಥಳವನ್ನು ನೋಡಲು ಬಂದ ಸಾರ್ವಜನಿಕರು ಮಾತನಾಡುವುದು ಕೇಳಿಬಂದಿದೆ.
ಸ್ಥಳಕ್ಕೆ ಸಿಪಿಐ ಎಸ್.ಎಸ್.ಸಿಮಾನಿ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ