ಈಶ್ವರಪ್ಪ 40% ಗೆ ತಲೆ ತೆಗೆದ ಕಮಿಷನ್ ಗಿರಾಕಿ: ಕಾಂಗ್ರೆಸ್ ವಾಗ್ದಾಳಿ

Update: 2023-01-05 10:02 GMT

ಬೆಂಗಳೂರು, ಜ.5: ರಾಜ್ಯ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡಿರುವ ಕಾಂಗ್ರೆಸ್ (, ಆಡಳಿತಾತ್ಮಕ ಚಿಂತನೆಗಳು ತಿಳಿಯದ ಬಿಜೆಪಿ ನಾಯಕರಿಗೆ ದ್ವೇಷ ಬಿತ್ತುವುದೊಂದೇ ತಿಳಿದಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದೆ.  

ಈ ಕುರಿತು ಗುರುವಾರ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ''40% ಗೆ ಒಂದು ತಲೆ ತೆಗೆದ ಕಮಿಷನ್ ಗಿರಾಕಿ ಕೆ.ಎಸ್ ಈಶ್ವರಪ್ಪ ಅವರು ಬಾಯಿ ತೆರೆದರೆ ಉದುರುವುದು ಅಶ್ಲೀಲದ & ದ್ವೇಷದ ನುಡಿಗಳೇ.. ಶಾಂತಿ ಇದ್ದರೆ ಬಿಜೆಪಿ ಬೇಳೆ ಬೇಯುವುದಿಲ್ಲ, ಏಕೆಂದರೆ ಬಿಜೆಪಿಗೆ ದ್ವೇಷ ಬಿಟ್ಟು ಅಭಿವೃದ್ಧಿಪರ ಯೋಚನೆಗಳಿಲ್ಲ. ರಸ್ತೆ ಗುಂಡಿಗಳಿಗೆ ಉರುಳಿದ ತಲೆಗಳು, ಕಮಿಷನ್ ಕಿರುಕುಳಕ್ಕೆ ಹೋದ ಜೀವಗಳ ಇವರಿಗೆ ಲೆಕ್ಕವಿಲ್ಲ'' ಎಂದು ಆರೋಪಿಸಿದೆ. 

''ಸಮಾಜದಲ್ಲಿನ ಲೋಪಗಳನ್ನು ಅರಿಯಲಾಗದ, ಅಭಿವೃದ್ಧಿಪರ, ಆಡಳಿತಾತ್ಮಕ ಚಿಂತನೆಗಳು ತಿಳಿಯದ ಬಿಜೆಪಿ ನಾಯಕರಿಗೆ ತಿಳಿದಿರುವುದು ದ್ವೇಷ ಬಿತ್ತುವುದೊಂದೇ. ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದಿದ್ದ "ದ್ವೇಷದ ಕ್ವಾರಿಯ ಮಾಲೀಕ" ಸಂಸದ ತೇಜಸ್ವಿ ಸೂರ್ಯ ಗೆ ತಿಳಿದಿದ್ದು ಎರಡೇ, ದ್ವೇಷ ಹಾಗೂ ದೋಸೆ'' ಎಂದು ವ್ಯಂಗ್ಯವಾಡಿದೆ.

''ಪಂಪ್ ವೆಲ್ ಮೇಲ್ಸೇತುವೆಯನ್ನು ನಿಗದಿಯಂತೆ ಪೂರ್ಣಗೊಳಿಸಲಾಗದ ನಳಿನ್ ಕುಮಾರ್ ಕಟೀಲ್ ಅವರು ಸೂರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಕರಾವಳಿಗರ ಕಿವಿ ಮೇಲೆ ಹೂವಿಟ್ಟಂತೆ ಈಗ ಮತ್ತೊಂದು ಲವ್ ಜಿಹಾದ್ ಹೂವು ಇಡಲು ಹೊರಟಿದ್ದಾರೆ. ಅಭಿವೃದ್ಧಿ ಆದ್ಯತೆಯಲ್ಲ ಎಂದು ಗಂಟಾಘೋಷವಾಗಿ ಹೇಳಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸಿಯಾಗಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Similar News