×
Ad

ಮಡಿಕೇರಿ | ಶಬರಿಮಲೆಗೆ ತೆರಳುತ್ತಿದ್ದ ವಾಹನ ಅಪಘಾತ; ಆಂಧ್ರದ ಮೂಲದ ಮೂವರಿಗೆ ಗಾಯ

Update: 2023-01-05 19:08 IST

ಮಡಿಕೇರಿ ಜ.5 : ಆಂಧ್ರದಿಂದ  ಕೇರಳದ ಶಬರಿಮಲೆಗೆ ತೆರಳುತ್ತಿದ್ದವರ ಟಿ.ಟಿ.ವಾಹನ ನಿಯಂತ್ರಣ ಕಳೆದುಕೊಂಡು  ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ  ಮಾಕುಟ್ಟದಲ್ಲಿ ನಡೆದಿದೆ.

ವಿರಾಜಪೇಟೆ ರಾಜ್ಯ ಗಡಿಭಾಗವಾದ ಮಾಕುಟ್ಟ ಅರಣ್ಯ ಪ್ರದೇಶದ ತಿರುವಿನಲ್ಲಿ  ಟಿ.ಟಿ.ವಾಹನ ನಿಯಂತ್ರಣ ಕಳೆದುಕೊಂಡು 20 ಅಡಿ ಪ್ರಪಾತಕ್ಕೆ ಸಾಗಿ ಮರಕ್ಕೆ ಢಿಕ್ಕಿ ಹೊಡೆದಿದೆ. ವಾಹನದಲ್ಲಿ 13 ಮಂದಿ ಇದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಇರಿಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News