ಸಚಿವ ಸಂಪುಟ ನೀಡಿದ 2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ: ಜಯಮೃತ್ಯುಂಜಯ ಸ್ವಾಮೀಜಿ

ಸಿಎಂ ಬೊಮ್ಮಾಯಿಗೆ 24 ಗಂಟೆಗಳ ಅಂತಿಮ ಗಡುವು ಕೊಟ್ಟ ಶಾಸಕ ಯತ್ನಾಳ್

Update: 2023-01-05 15:32 GMT

ಬೆಳಗಾವಿ, ಜ.5: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರಕಾರ ಘೋಷಿಸಿರುವ 2ಡಿ ಮೀಸಲಾತಿಯನ್ನು ಸಂಪೂರ್ಣ ತಿರಸ್ಕರಿಸುವ ನಿರ್ಣಯ ಕೈಗೊಂಡಿದ್ದೇವೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಗಾಂಧಿ ಭವನದಲ್ಲಿ ಪಂಚಮಸಾಲಿ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡುತ್ತಾ, ಸರ್ಕಾರ ಘೋಷಿಸಿರುವ 2 ಡಿ ಮೀಸಲಾತಿಯನ್ನು ಪಂಚಮಸಾಲಿ ಸಮಾಜ ತಿರಸ್ಕರಿಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ''ಬಸವರಾಜ ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಈವರೆಗೂ ಹಾದಿ ತಪ್ಪಿಸುವ ಕೆಲಸವನ್ನೇ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಹಿಂದುಳಿದ ಆಯೋದ ವರದಿ ತರೆಸುತ್ತಾರೆ. ಪಂಚಮಸಾಲಿಗಳಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಮುಂದಿನ 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತೀರೋ? ಇಲ್ಲವೋ? ಹೇಳಬೇ" ಎಂದು ಎಚ್ಚರಿಸಿದ್ದಾರೆ.

''ಇದೇ ತಿಂಗಳು ಜನವರಿ12 ರ ಒಳಗಾಗಿ ಸರಕಾರ ಮೀಸಲಾತಿ  ಘೋಷಣೆ ಮಾಡಬೇಕು. ಘೋಷಣೆ ಮಾಡದಿದ್ದರೆ ಜನವರಿ 13 ರಂದು ಹಾವೇರಿಯ ಮುಖ್ಯಮಂತ್ರಿ ಮನೆ ಮುಂದೆ ಒಂದು ದಿನ ಉಗ್ರ ಹೋರಾಟ ಮಾಡುತ್ತೇವೆ''

-  ಬಸವ ಜಯಮೃತ್ಯುಂಜಯ ಸ್ವಾಮೀಜಿ

Similar News