×
Ad

ಬಿಜೆಪಿಯ 'ಗುಡ್‌ ಮಾರ್ನಿಂಗ್‌' ಟ್ವೀಟ್ಗೆ 'ಗುಡ್ ಆಫ್ಟರ್‌ನೂನ್' ಟ್ವೀಟ್ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದ್ದು ಹೀಗೆ

Update: 2023-01-05 21:39 IST

ಬೆಂಗಳೂರು, ಜ.5: ಗುರುವಾರ (ಇಂದು) ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಭೇಟಿ ನೀಡುತ್ತಿದ್ದಂತೆ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ 'ಗುಡ್‌ ಮಾರ್ನಿಂಗ್‌' ಎಂದು ಹೇಳಿ ''ಜೆ.ಪಿ ನಡ್ಡಾ ರವರು ರಾಜ್ಯಕ್ಕೆ ಬಂದಿಳಿದಿದ್ದಾರೆ'' ಎಂಬ ಸಂದೇಶ ಕೊಟ್ಟಿತ್ತು. 

ಈ ಟ್ವೀಟ್ ಅನ್ನು ಮಧ್ಯಾಹ್ನ ವೇಳೆ ರಿಟ್ವೀಟ್ ಮಾಡಿರುವ ಕಾಂಗ್ರೆಸ್ (@INCKarnataka), 'ಗುಡ್ ಆಫ್ಟರ್‌ನೂನ್ ಬಿಜೆಪಿ'  ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಹಣಕ್ಕೂ ಜೆಪಿ ನಡ್ಡಾ ಬಂದಿರುವುದಕ್ಕೂ ಸಂಬಂಧವಿದೆಯೇ? ಎಂದು ಪ್ರಶ್ನಿಸಿ ತಿರುಗೇಟು ನೀಡಿದೆ. 

ಬಿಜೆಪಿ ಟ್ವೀಟ್ ಹೀಗಿದೆ... ''ಗುಡ್‌ ಮಾರ್ನಿಂಗ್‌ ಕಾಂಗ್ರೆಸ್, ಜೆಡಿಎಸ್ ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ರವರು ರಾಜ್ಯಕ್ಕೆ ಬಂದಿಳಿದಿದ್ದಾರೆ. ಇದು ಸಹಜವಾಗಿಯೇ ತಮಗೆಲ್ಲ ಕಳವಳವಾಗಿರುವುದರಿಂದ, ತಮ್ಮ ಟೂಲ್‌ ಕಿಟ್‌ಗಳನ್ನು ಹೊರ ತೆಗೆದು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು'' ಎಂದು ಬರೆದುಕೊಂಡಿದೆ. 

ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ... ''ಗುಡ್ ಆಫ್ಟರ್‌ನೂನ್ ಬಿಜೆಪಿ, ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಹಣಕ್ಕೂ ಜೆಪಿ ನಡ್ಡಾ ಬಂದಿರುವುದಕ್ಕೂ ಸಂಬಂಧವಿದೆಯೇ? 40% ಕಮಿಷನ್‌ನಲ್ಲಿ ದೆಹಲಿ ಪಾಲು ತಲುಪಿಸಲು ತರಿಸಿದ ಹಣವೇ? ಸಿಎಂ ಹುದ್ದೆಯ 2,500 ಕೋಟಿಯ ಬಾಕಿ ವಸೂಲಿಗೆ ಬಂದಿರುವುದೇ? ಹಾಗೆಯೇ, ಸ್ಯಾಂಟ್ರೋ ರವಿ ವಿಚಾರದಲ್ಲಿ ಇಡೀ ಸರ್ಕಾರವೇ ಕಳವಳಗೊಂಡಿರುವುದೇಕೆ?'' ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 

Similar News