×
Ad

ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ನಿರ್ಧಾರ ಮಾಡಿಲ್ಲ, ಆದರೆ...: ಸಂಸದೆ ಸುಮಲತಾ ಹೇಳಿದ್ದೇನು?

Update: 2023-01-06 16:36 IST

ಮಂಡ್ಯ, ಜ.6: ಬಿಜೆಪಿ ಪಕ್ಷ ಸೇರ್ಪಡೆಯ ಬಗ್ಗೆ ಮಂಡ್ಯ ಲೋಕ ಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. 

ಮಂಡ್ಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ''ನಾನು ಬಿಜೆಪಿ ಸೇರ್ಪಡೆಯ ಸದ್ಯಕ್ಕೆ ನಾನು ನಿರ್ಧಾರ ಮಾಡಿಲ್ಲ. ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿರುವುದು ನಿಜ. ಹಾಗೇನಾದರೂ ಇದ್ದರೆ ನಾನೇ ಮಾಧ್ಯಮಗಳಿಗೆ ತಿಳಿಸುತ್ತೇನೆ'' ಎಂದು ತಿಳಿಸಿದರು.

''ಫ್ಲೆಕ್ಸ್​​ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೆ ನನ್ನ ಅಡ್ಡಿಯೇನಿಲ್ಲ. ಅದನ್ನೇ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ನಾನೇನು ಮಾಡಲಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ'' ಎಂದು ಸ್ಪಷ್ಟ ಪಡಿಸಿದರು.

Similar News