ಕರ್ನಾಟಕದ ಈ ನಗರದಲ್ಲಿ ಸೈಬರ್ ಅಪರಾಧ ಗರಿಷ್ಠ!

Update: 2023-01-08 04:10 GMT

ಮೈಸೂರು: ಸೈಬರ್ ಅಪರಾಧಗಳು ಇದೀಗ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಮೈಸೂರಿನಂತ ಸಣ್ಣ ನಗರಗಳಲ್ಲೂ ತಂತ್ರಜ್ಞಾನ ಅರಿತ ಅಪರಾಧಿಗಳು ಇದ್ದಾರೆ. 2022ರಲ್ಲಿ ಈ ಪರಂಪರಾ ನಗರ ಗರಿಷ್ಠ ಸಂಖ್ಯೆಯ ಸೈಬರ್ ಅಪರಾಧಗಳನ್ನು ದಾಖಲಿಸಿದೆ ಎಂದು ಸೈಬರ್, ಆರ್ಥಿಕ ಮತ್ತು ನಾರ್ಕೊಟಿಕ್ಸ್ (ಸಿಇಎನ್) ವಿಭಾಗದ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ನಗರದಲ್ಲಿ 2022ರಲ್ಲಿ ಒಟ್ಟು 285 ಸೈಬರ್ ಅಪರಾಧಗಳು ವರದಿಯಾಗಿವೆ. ಸೈಬರ್ ಪೊಲೀಸರು ಇದುವರೆಗೆ ದಾಖಲಾದ ಶೇಕಡ 35ರಷ್ಟು ಪ್ರಕರಣಗಳನ್ನು ಬಗೆಹರಿಸಿದ್ದಾರೆ ಹಾಗೂ ಸಂತ್ರಸ್ತರಿಗೆ ಸುಮಾರು ಒಂದು ಕೋಟಿ ರೂಪಾಯಿ ಮೊತ್ತವನ್ನು ವಾಪಾಸು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾರ್ವಜನಿಕರು ಇಂತಹ ಪ್ರಕರಣಗಳನ್ನು ದಾಖಲಿಸುವಲ್ಲಿ ವಿಳಂಬ ಮಾಡಬಾರದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್ ಹೇಳುತ್ತಾರೆ. ಇದಕ್ಕಾಗಿಯೇ 1930 ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ವಂಚನೆಗೆ ಒಳಗಾದ ತಕ್ಷಣವೇ ಕರೆ ಮಾಡಬೇಕು ಎನ್ನುವುದು ಅವರ ಸಲಹೆ. ತಕ್ಷಣವೇ ಕರೆ ಮಾಡಿದಲ್ಲಿ ಪೊಲೀಸರು ಅಂತಹ ಖಾತೆ ಅಥವಾ ಕಾರ್ಡ್ ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ ಹಾಗೂ ಕಳ್ಳತನ ಮಾಡಿದ ಹಣ ವಶಪಡಿಸಿಕೊಳ್ಳುವ ಅವಕಾಶವೂ ಜಾಸ್ತಿ ಎಂದು ಅವರು ವಿವರಿಸಿದ್ದಾರೆ.

ಮೈಸೂರಿನ 30 ವರ್ಷವ ವಿಧವೆಯೊಬ್ಬರು ಇಂಥ ವಂಚಕರ ಖಾತೆಗೆ ಇತ್ತೀಚೆಗೆ 2.7 ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದರು.

ವರ್ಕ್ ಫ್ರಮ್ ಹೋಮ್ ಲಿಂಕ್‌ನಿಂದ ಮರು ನಿರ್ದೇಶಿಸಲ್ಪಟ್ಟ ಲಿಂಕ್ ಕ್ಲಿಕ್ ಮಾಡಿದಾಗ ಹೂಡಿಕೆಯ ಮೇಲೆ ಗರಿಷ್ಠ ಪ್ರತಿಫಲ ನೀಡುವ ಆಮಿಷ ತೋರಿಸಿ ಮಹಿಳೆಯನ್ನು ವಂಚಿಸಲಾಗಿತ್ತು. ಇಂತಹ ಪ್ರಕರಣಗಳ ಬಗ್ಗೆ ಮತ್ತು ಸೈಬರ್ ಅಪರಾಧಿಗಳ ಕಾರ್ಯವೈಖರಿ ಬಗ್ಗೆ ಜಾಗೃತಿ ಮೂಡಿಸಲು ಸಿಇಎನ್ ಘಟಕ ಅವಿರತವಾಗಿ ಶ್ರಮಿಸುತ್ತಿದೆ ಎಂದು ಇನ್‌ಸ್ಪೆಕ್ಟರ್ ಜಯಕುಮಾರ್ ಹೇಳಿದ್ದಾರೆ.

Similar News