ಕಡೂರು | ಬ್ರಿಟನ್ ರಾಣಿ ವಿಕ್ಟೋರಿಯಾ ಕಾಲದ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನ: ಆರೋಪಿಯ ಸೆರೆ
Update: 2023-01-08 13:34 IST
ಚಿಕ್ಕಮಗಳೂರು, ಜ.8: ಪುರಾತನ ಕಾಲದ ಟೆಲಿಸ್ಕೋಪ್ ಒಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರದ ಸಂಕ್ರಾತಿ ವೃತ್ತದ ನಿವಾಸಿ ಕೆಂಪರಾಜ್ ಬಂಧಿತ ಆರೋಪಿ.
ಈತ 1915ರ ಕಾಲದ, ಬ್ರಿಟನ್ ರಾಣಿ ವಿಕ್ಟೋರಿಯಾ ಅವಧಿಯ ಟೆಲಿಸ್ಕೋಪ್ ವೊಂದನ್ನು ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿಸಿದ್ದ ಕೆಂಪರಾಜ್ ಅದನ್ನು ಜಿಲ್ಲೆಯ ಕಡೂರು ಪಟ್ಟಣಕ್ಕೆ ತಂದು ಪಟ್ಟಣದ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ ಮಾರಾಟ ಮಾಡಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಟೆಲಿಸ್ಕೋಪ್ ನ್ನು ವ್ಯಾಪಾರಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದ ಎಂದು ತಿಳಿದುಬಂದಿದೆ. ಖಚಿತ ಮಾಹಿತಿಯ ಹಿನ್ನೆಲಯಲ್ಲಿ ದಾಳಿ ನಡೆಸಿದ ಕಡೂರು ಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸಿ ಟೆಲಿಸ್ಕೋಪನ್ನು ವಶಕ್ಕೆ ಪಡೆದಿದ್ದಾರೆ.