ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ: ಸಮರ್ಥಿಸಿಕೊಂಡ ಪ್ರಹ್ಲಾದ್ ಜೋಶಿ

Update: 2023-01-08 10:50 GMT

ಬೆಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕ ರಾಜ್ಯದ  ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಿಸಿರುವುದನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸ್ತಬ್ಧ ಚಿತ್ರ ಆಯ್ಕೆಗೆ ಒಂದು ವ್ಯವಸ್ಥೆ ಇದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳು ಸೇರಿ ಒಟ್ಟು 36 ಸ್ತಬ್ದ ಚಿತ್ರಗಳಲ್ಲಿ 12 ಸ್ತಬ್ಧಚಿತ್ರ ಮಾತ್ರ ಆಯ್ಕೆ ಆಗುತ್ತವೆ. 13 ವರ್ಷ ಕರ್ನಾಟಕ ರಾಜ್ಯಕ್ಕೆ ಅವಕಾಶ ಸಿಕ್ಕಿದೆ' ಎಂದು ಹೇಳಿದ್ದಾರೆ.

''36  ಸ್ತಬ್ಧ ಚಿತ್ರ ಮೆರವಣಿಗೆಗೆ ಒಂದೂವರೆ ತಾಸು ಬದಲು 4 ತಾಸು ಆಗುತ್ತದೆ. ತಜ್ಞರ ಸಮಿತಿಯಿಂದ ಸ್ತಬ್ಧ ಚಿತ್ರದ ಆಯ್ಕೆ ನಡೆಯುತ್ತದೆ. ತಜ್ಞರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: 13 ವರ್ಷ ಬಳಿಕ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳು ಇಲ್ಲ!

Similar News