×
Ad

ಕೊಡಗು: ಹೃದಯಾಘಾತದಿಂದ 6ನೇ ತರಗತಿ ವಿದ್ಯಾರ್ಥಿ ಮೃತ್ಯು

Update: 2023-01-08 16:32 IST

ಮಡಿಕೇರಿ, ಜ.8: ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ರವಿವಾರ ವರದಿಯಾಗಿದೆ. 

ಕೂಡುಮಂಗಳೂರು ಗ್ರಾಮದ ಮಂಜಾಚಾರಿ ಅವರ ಪುತ್ರ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿ ಕೀರ್ತನ್ (12) ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಶನಿವಾರ ತಡರಾತ್ರಿ ಮಲಗಿದ ಜಾಗದಿಂದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದು, ತಕ್ಷಣ ಪೋಷಕರು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈತ ಓದುತ್ತಿದ್ದ ಅದೇ ಶಾಲೆಯ ಬಸ್ ಚಾಲಕನಾಗಿ ಬಾಲಕನ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

Similar News