ಶೋಷಿತ ಸಮುದಾಯ, ಮುಸ್ಲಿಮ್ ಸಾಹಿತ್ಯಾಸಕ್ತರನ್ನು ಹೊರಗಿಟ್ಟು ರಾಜಕೀಯ: ಸಮ್ಮೇಳನದ ವೇದಿಕೆಯಲ್ಲಿಯೇ ಹರಿಪ್ರಸಾದ್ ಅಸಮಾಧಾನ

Update: 2023-01-08 18:20 GMT

ಹಾವೇರಿ, ಜ. 8: ಶೋಷಿತ ಸಮುದಾಯ ಹಾಗೂ ಮುಸ್ಲಿಮ್ ಸಾಹಿತ್ಯಾಸಕ್ತರನ್ನು ಹೊರಗಿಟ್ಟು ರಾಜಕೀಯ ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಾಹತ್ಯ ಸಮ್ಮೇಳನ ಪ್ರಮುಖ ವೇದಿಕೆಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು.

ರವಿವಾರ ಹಾವೇರಿಯ ಜಿಲ್ಲಾ ಕೇಂದ್ರದಲ್ಲಿ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ ಮುಸ್ಲಿಮ್ ಸಾಹಿತಿಗಳು ಸೇರಿದಂತೆ ತಳ ಸಮುದಾಯಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆಯೇ ಆಹ್ವಾನ ಪತ್ರಿಕೆಯೇ ಇದೆ ಎಂದು ಹೇಳಿದರು.

ಈ ವೇಳೆ ಸಮಾಜಾಯಿಸಿ ನೀಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ನಾನು ಸಂತ ಶಿಶುನಾಳ ಶರೀಫರ ನಾಡಿನಲ್ಲಿ ನಿಂತಿದ್ದು, ಮುಸ್ಲಿಮರಿಗೆ ಅನ್ಯಾಯ ಮಾಡಿದು ಉಂಟಾ. ಅಲ್ಲದೆ, ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರಿಗೆ ಅವಕಾಶ ಕೊಟ್ಟಿದ್ದು, ಅದನ್ನು ದಾಖಲೆ ಸಮೇತ ನಾನು ಹೇಳುವೆ ಎಂದು ಪುನರುಚ್ಚಿಸಿದರು.

Similar News