×
Ad

ಪಟಾಕಿ ಹಚ್ಚಿ ಸಂಭ್ರಮಿಸಿ, ದಿವ್ಯಾ ಹಾಗರಗಿಯನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು: ಕಾಂಗ್ರೆಸ್ ವಾಗ್ದಾಳಿ

Update: 2023-01-08 23:05 IST

ಬೆಂಗಳೂರು, ಜ. 8: ‘ಭ್ರಷ್ಟ ಬಿಜೆಪಿ ಸರಕಾರದ ಆಡಳಿತದ ವಿಪರ್ಯಾಸ ಇದು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ 56ಸಾವಿರ ಪಿಎಸ್ಸೈ ಅಭ್ಯರ್ಥಿಗಳು ಭವಿಷ್ಯದ ದಿಕ್ಕು ಕಾಣದೆ ನೋವು ಅನುಭವಿಸುತ್ತಿದ್ದಾರೆ. ಅಕ್ರಮ ನಡೆಸಿದ ಆರೋಪಿಗಳು ಸರಕಾರದ ಸಹಕಾರದಿಂದ ಜಾಮೀನು ಪಡೆದು, ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ 56 ಸಾವಿರ ಯುವಕರನ್ನು ಅಣಕಿಸುತ್ತಿದೆ ಸರಕಾರ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರಕಾರದ ಸಹಕಾರ, ಗೃಹ ಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ ಪಿಎಸ್ಸೈ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು. ಯಾಕೆ ಈ ಸಂಭ್ರಮ?, 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ?, ಸರಕಾರದ ಕಿಂಗ್‍ಪಿನ್‍ಗಳನ್ನು ಬಚಾವು ಮಾಡಿದ್ದಕ್ಕಾ?’ ಎಂದು ಪ್ರಶ್ನಿಸಿದೆ.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಿಗಿ ಯನ್ನು ಜನವರಿ 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.  ಅಂದು ದಿವ್ಯಾ ಹಾಗರಗಿ ಸೇರಿ 217 ಜನರನ್ನು ನ್ಯಾಯಾಲಯ ಷರತ್ತುಬದ್ದ ಜಾಮೀನಿನಮೇಲೆ ಬಿಡುಗಡೆ ಮಾಡಿದೆ.

Full View

Similar News