ಚಾಮರಾಜನಗರ | ಆಕಸ್ಮಿಕ ಬೆಂಕಿ ತಗಲಿ ಕೊಟ್ಟಿಗೆ ಭಸ್ಮ: ಎರಡು ಎತ್ತುಗಳು ಸಜೀವ ದಹನ

Update: 2023-01-09 06:27 GMT

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ವೈ. ಕೆ.ಮೊಳೆ ಗ್ರಾಮದ ಸಿದ್ದರಾಜು ಎಂಬವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಎರಡು ಎತ್ತುಗಳು ಸಜೀವ ದಹನವಾದ ಘಟನೆ ರವಿವಾರ ತಡರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಸಿದ್ದರಾಜು ಎಂಬವರಿಗೆ ಸೇರಿದ ಎತ್ತುಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ವೈಕೆ ಮೋಳೆ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು ಸಹ ವಿಫಲವಾಗಿದೆ. ಬಳಿಕ ಅಗ್ನಿ ಶಾಮಕ ದಳ ಹಾಗೂ ಠಾಣೆಗೆ ಮಾಹಿತಿ ನೀಡಿದರು. ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ವೈಕೆ ಮೋಳೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪರಾಜು ಮನವಿ ಮಾಡಿದರು.

Similar News