ಕೆ.ಎಚ್ ಮುನಿಯಪ್ಪ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ?

ಒಂದೇ ಕಾರಿನಲ್ಲಿ ಕೋಲಾರಕ್ಕೆ ಪ್ರಯಾಣ ಬೆಳೆಸಿದ ಉಭಯ ನಾಯಕರು

Update: 2023-01-09 08:51 GMT

ಬೆಂಗಳೂರು, ಜ.9: ಕಳೆದ ಲೋಕಸಭಾ ಚುನಾವಣೆಯಲ್ಲಿ ಉಂಟಾದ ಬಿರುಕಿನಿಂದ ರಮೇಶ್ ಕುಮಾರ್ ಹಾಗೂ ಇನ್ನಿತರೆ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿಯಾಗಿರುವ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಳಿಕ ಕೋಲಾರದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. 

ಇಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪನವರ ಬೆಂಗಳೂರಿನ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ,  ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೇ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ.  ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ಪಕ್ಷದ ಜವಾಬ್ದಾರಿಯನ್ನ ಹೊರಬೇಕು, ಮಿಕ್ಕವರು ಅವರವರ ಕ್ಷೇತ್ರಗಳ ಜವಾಬ್ದಾರಿಗಳನ್ನ ನೋಡಿಕೊಳ್ಳಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿದ ಕೆ.ಹೆಚ್.ಮುನಿಯಪ್ಪ,  ಸಭೆಯಲ್ಲಿ ಭಾಗವಹಿಸಲು ಒಪ್ಪಿದರು ಎಂದು ಹೇಳಲಾಗಿದೆ.

ಮಾತುಕತೆ ಬಳಿಕ ಮುನಿಯಪ್ಪರನ್ನು ಸಿದ್ದರಾಮಯ್ಯರವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕೋಲಾರಕ್ಕೆ ತೆರಳಿದ್ದು, ಆ ಮೂಲಕ ಕೆ.ಎಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸು ಬಗ್ಗೆ ಇದ್ದ ಅನುಮಾನ ಬಹುತೇಕ ಶಮನಗೊಂಡಂತಾಗಿದೆ. 

ಮಾತುಕತೆ ವೇಳೆ ಕಾಂಗ್ರೆಸ್ ಪಕ್ಷದ ಕೋಲಾರ ಜಿಲ್ಲಾ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕೆ.ಎಚ್ ಮುನಿಯಪ್ಪ ಬಣದ ಹಿರಿಯ ಮುಖಂಡರಾದ ದಳಸನೂರು ಗೋಪಾಲಕೃಷ್ಣ, ಶೇಷಾಪುರ ಗೋಪಾಲ್, ಕೋಲಾರ ನಗರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಅದ್ಯಕ್ಷ ಉದಯಶಂಕರ್, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಎಲ್.ಎ.ಮಂಜುನಾಥ್, ಎಸ್.ಸಿ ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ಕೆ. ಜಯದೇವ, ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ನಾಗರಾಜ್, ಮುಖಂಡ ಗಂಗಮ್ಮನಪಾಳ್ಯ ರಾಮಯ್ಯ ಮೊದಲಾದವರಿದ್ದರು.

Similar News