ಕಲಬುರಗಿ: ಯಶೋಧ ಹೈಟೆಕ್ ಸಿಟಿ ಆಸ್ಪತ್ರೆಯ ವತಿಯಿಂದ "ಯಶೋಧ ಬಂಧನ್ ಮೀಟ್" ಕಾರ್ಯಕ್ರಮ
ಮಂಗಳೂರು: ಹೈದರಾಬಾದ್ ನಲ್ಲಿರುವ ಯಶೋಧ ಹೈಟೆಕ್ ಸಿಟಿ ಆಸ್ಪತ್ರೆಯ ವತಿಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಲಬುರಗಿ ( IMA) ಇದರ ಸಹಯೋಗದೊಂದಿಗೆ "ಯಶೋಧ ಬಂಧನ್ ಮೀಟ್' ಕಾರ್ಯಕ್ರಮ ಕಲಬುರಗಿಯಲ್ಲಿ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯಶೊಧ ಆಸ್ಪತ್ರೆಯ ನಿರ್ದೇಶಕರಾದ ಡಾ.ಪವನ್ ಗೋರುಕಂಟಿ ಮತ್ತು ವಿವಿಧ ಸ್ಪೆಷಾಲಿಟಿಗೆ ಸಂಬಂಧಪಟ್ಟ 15ಕ್ಕೂ ಹೆಚ್ಚು ಪ್ರಸಿದ್ಧ ವೈದ್ಯರು ಹಾಜರಿದ್ದರು. ಅದಲ್ಲದೆ, ಕಲಬುರಗಿ ವ್ಯಾಪ್ತಿಯ 400ಕ್ಕೂ ಹೆಚ್ಚಿನ ವೈದ್ಯರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಎಲ್ಲ ವೈದ್ಯರು ವಿಚಾರವಿನಿಮಯದ ಜೊತೆಗೆ ಯಶೋಧ ಆಸ್ಪತ್ರೆ ಹೈಟೆಕ್ ಸಿಟಿಯಲ್ಲಿ ಲಭ್ಯವಿರುವ ಆಧುನಿಕ ಉಪಕರಣಗಳು, ತಂತ್ರಜ್ಞಾನದ ಬಗ್ಗೆ ಚರ್ಚಿಸಿದರು. ಯಶೋಧ ಆಸ್ಪತ್ರೆ ಹೈಟೆಕ್ ಸಿಟಿ ಹೈದರಾಬಾದ್ ಎರಡು ಸಾವಿರ ಬೆಡ್ ಸಾಮರ್ಥ್ಯವಿರುವ ಭಾರತದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆಧುನಿಕ ಉಪಕರಣಗಳು ಮತ್ತು ಅತ್ಯುತ್ತಮ ತರಬೇತಿ ಹೊಂದಿರುವ ಹಿರಿಯ ಮತ್ತು ಅನುಭವಿ ವೈದ್ಯರನ್ನು ಒಳಗೊಂಡಿದೆ.