×
Ad

ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಶಾಸಕರಾದರೆ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯುತ್ತೆ: ಕೃಷ್ಣಭೈರೇಗೌಡ

Update: 2023-01-09 16:14 IST

ಕೋಲಾರ: 'ಕೋಲಾರ ಜಿಲ್ಲೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೆನಾಡನ್ನಾಗಿಸಿದ್ದಾರೆ. ಅವರು ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆ, ಎತ್ತಿನಹೊಳೆ ಯೋಜನೆ,  ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮುಂತಾದ ಉಪಯುಕ್ತ ಯೋಜನೆಗಳನ್ನು ಜಿಲ್ಲೆಗೆ ನೀಡಿದ್ದಾರೆ' ಎಂದು  ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. 

ಕೋಲಾರದ ಮಿನಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡುತ್ತದ್ದ ಅವರು, 'ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ಈ ಮೂಲಕ ಕೋಲಾರದ ಅಭಿವೃದ್ಧಿ ಮಾಡಲು ಆನೆ ಬಲ ಸಿಗಲಿದೆ. ಕೋಲಾರ ಕ್ಷೇತ್ರದ ಶಾಸಕರಾದರೆ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯುತ್ತೆ' ಎಂದರು.

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ:  ಕೆ.ಸಿ.ವ್ಯಾಲಿ ನೀರಿನ ಬಗ್ಗೆ ಕೋಲಾರಕ್ಕೆ ಬಂದು ಮಾತನಾಡುತ್ತೀರಿ. ತಾವು ಮುಖ್ಯಮಂತ್ರಿಗಳಾಗಿದ್ದವರು, ನಿಮ್ಮ ತಂದೆ ಪ್ರಧಾನ ಮಂತ್ರಿಗಳಾಗಿದ್ದವರು. ತಾವು ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಕೊಡಬಹುದುತ್ತಲ್ವಾ? ಆಗ ಯಾಕೆ ಕೋಲಾರ ಭಾಗದ ಕುರಿತು ಯೋಚನೆ ಮಾಡಿಲ್ಲ. ಈಗ ಇಲ್ಲಿ ಬಂದು ಕಲ್ಲಾಕುತ್ತಿದ್ದೀರಿ, ಇಂತಹ ಸ್ವಾರ್ಥ ರಾಜಕೀಯ ಬೇಡ ಎಂದು ಕುಮಾರಸ್ವಾಮಿ ವಿರುದ್ಧ ಕೃಷ್ಣಭೈರೇಗೌಡ  ವಾಗ್ದಾಳಿ ನಡೆಸಿದರು.

Similar News