ಶಿವಮೊಗ್ಗ: ಚಾಕೊಲೇಟ್ ಎಂದು ಇಲಿ ಪಾಷಾಣ ತಿಂದು ಮಗು ಮೃತ್ಯು
Update: 2023-01-09 17:02 IST
ತೀರ್ಥಹಳ್ಳಿ: ಇಲಿ ಸಾಯಿಸಲು ಇಟ್ಟಿದ್ದ ಇಲಿ ಪಾಷಣವನ್ನು ಚಾಕೊಲೇಟ್ ಎಂದು ಭಾವಿಸಿ ತಿಂದ 5 ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದಲ್ಲಿ ಶನಿವಾರ ನಡೆದಿದೆ.
ಬೆಜ್ಜವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದ್ರಪ್ಪ ಮತ್ತು ಗೀತಾ ದಂಪತಿ ಪುತ್ರ 5 ವರ್ಷದ ಪ್ರೀತಮ್ ಮನೆಯಲ್ಲಿ ಇಲಿ ಸಾಯಿಸಲು ಇಟ್ಟಿದ್ದ ಇಲಿ ಪಾಷಣವನ್ನು ಚಾಕೊಲೇಟ್ ಎಂದು ಭಾವಿಸಿ ಶುಕ್ರವಾರ ರಾತ್ರಿ ತಿಂದಿದ್ದಾನೆ. ಬಳಿಕ ಶನಿವಾರ ಆತನ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.