ರಾಯಚೂರು: ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತ್ಯು
ರಾಯಚೂರು, ಜ.9: ಗ್ರಾಮ ಪಂಚಾಯತ್ ತೋಡಿ ಬಿಟ್ಟ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಇಲ್ಲಿನ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ವರದಿಯಾಗಿದೆ.
ಅಜಯ್ (8) ಹಾಗೂ ಯಲ್ಲಾಲಿಂಗ (6) ಮೃತ ಬಾಲಕರು ಎಂದು ತಿಳಿದು ಬಂದಿದೆ.
ಬ್ಯಾಗವಾಟ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಈ ಘಟನೆ ನಡೆದಿದೆ. ಬೆಟ್ಟದ ನೀರು ಶಾಲಾ ಮೈದಾನಕ್ಕೆ ಬಾರದಂತೆ ತಡೆಯಲು ಗ್ರಾಮ ಪಂಚಾಯತ್ ನಿಂದ ಗುಂಡಿ ತೋಡಲಾಗಿತ್ತು. 32 ಅಡಿ ಉದ್ದ, 6 ಅಡಿ ಅಗಲ ಹಾಗೂ 8 ಅಡಿ ಆಳದ ಗುಂಡಿಯನ್ನು ನಿರ್ಮಿಸಲಾಗಿತ್ತೆನ್ನಲಾಗಿದ್ದು, ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದರಿಂದ ಗುಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಆಟವಾಡಲು ಹೋಗಿದ್ದ ವೇಳೆ ಬಾಲಕರು ಕಾಲುಜಾರಿ ಗುಂಡಿಗೆ ಬಿದ್ದಿದ್ದು, ಬಾಲಕರು ಮೇಲೆ ಬರಲಾಗದೆ ಅಲ್ಲೇ ಮುಳಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಉದ್ಘಾಟಿಸಿದ ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ರ‍್ಯಾಪಿಡ್ ರಸ್ತೆ