×
Ad

ಕಲಬುರಗಿ | ಪಿಕ್​ಅಪ್ ವಾಹನ ಪಲ್ಟಿ; 8 ವಿದ್ಯಾರ್ಥಿಗಳ ಸ್ಥಿತಿ ಗಂಭೀರ

Update: 2023-01-09 20:50 IST

ಕಲಬುರಗಿ: ಪಿಕ್ ಅಪ್ ವಾಹನವೊಂದು ಮಗುಚಿ 8 ಶಾಲಾ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ಬಳಿ ನಡೆದಿದೆ.

ಸಂಜನಾ, ಸ್ಪೂರ್ತಿ, ಸಚೀನ್, ಶಾಲಿನಿ, ಪಾಯಲ್ ಸೇರಿದಂತೆ ಇನ್ನೂ 8 ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಬಸ್ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಶಾಲೆ ಮುಗಿಸಿ ಮಹಗಾಂವ್​ನಿಂದ ಮಡಕಿ ತಾಂಡಾಕ್ಕೆ ವಿದ್ಯಾರ್ಥಿಗಳು ಪಿಕ್​ಅಪ್​ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಪಿಕ್​ಅಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳು ಶಾಲಾ ವಿದ್ಯಾರ್ಥಿಗಳನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News