ಗ್ರಾಚ್ಯುಟಿ ಪಾವತಿ ಕುರಿತು ಸ್ಪಷ್ಟನೆ ನೀಡಿದ KSRTC

Update: 2023-01-09 15:39 GMT

ಬೆಂಗಳೂರು, ಜ.8: ಸಾರಿಗೆ ನಿಗಮಗಳ ಕಾರ್ಮಿಕರಿಗೆ ನೀಡಬೇಕಾಗಿರುವ ಯಾವುದೇ ಹಣವನ್ನು ಅವರಿಗೆ ನೀಡಬೇಕಾಗಿರುವುದು ನಿಗಮಗಳ ಕರ್ತವ್ಯವಾಗಿದ್ದು, ನಿವೃತ್ತ ಸಿಬ್ಬಂದಿಗಳಿಗೆ ಗ್ರಾಚ್ಯುಟಿ ಪಾವತಿ ಮಾಡುವುದು ಕೋವಿಡ್ ಕಾರಣದಿಂದಾಗಿ ವಿಳಂಬವಾಗಿದೆಯೇ ಹೊರತು ಅಕ್ರಮ ಅವ್ಯವಹಾರ ಆಗಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಪಡಿಸಿದೆ.

ಕೆಎಸ್ಸಾರ್ಟಿಸಿಯಲ್ಲಿ 92.50 ಕೋಟಿ ರೂ., ಬಿಎಂಟಿಸಿ 99.02 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ 33 ಕೋಟಿ ರೂ., ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 170.82 ಕೋಟಿ ರೂ. ಗ್ರಾಚುಟಿ ಪಾವತಿ ಬಾಕಿ ಇದೆ. ಆದರೆ ಸಿಬ್ಬಂದಿಗಳಿಂದ ಯಾವುದೇ ಹಣ ಕಡಿತವಾಗುವುದಿಲ್ಲ ತಿಳಿಸಿದೆ.

ಕೋವಿಡ್ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ನಿಗದಿತ ಆದಾಯ ಇಲ್ಲದೆ ಸಂಬಳ, ಡೀಸಲ್ ವೆಚ್ಚ ಸರಿದೂಗಿಸುವ ಸವಾಲಿತ್ತು. ಹೀಗಾಗಿ ನಿಗಮಗಳಲ್ಲಿ 395.34 ಕೋಟಿ ರೂ. ಗ್ರಾಚುಟಿ ಪಾವತಿ ಬಾಕಿ ಇದೆ. ಆದರೆ ಗ್ರಾಚುಟಿ ಪಾವತಿಗೆ ಸಿಬ್ಬಂದಿಗಳಿಂದ ಯಾವುದೇ  ಹಣ ಕಡಿತವಾಗುವುದಿಲ್ಲ ಎಂದು ತಿಳಿಸಿದೆ.

Similar News