'ಮಾಂಸ ನೇತು ಹಾಕುವುದು ನಿಲ್ಲಲಿ': ಮಠಾಧೀಶರ ಸಲಹೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

Update: 2023-01-10 12:29 GMT

ಬೆಂಗಳೂರು, ಜ.10: ಇತ್ತೀಚೆಗೆ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ನೀಡಿದ ‘ಮಾಂಸಾಹಾರ ಆರೋಗ್ಯಕ್ಕೆ ಕೆಟ್ಟದು’ ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. 

ಇದೀಗ ನಿನ್ನೆ  (ಸೋಮವಾರ) ವಿಧಾನಸೌಧದಲ್ಲಿ ಶಾಲಾ ಹಂತದಲ್ಲಿ ‘ಮೌಲ್ಯ ಶಿಕ್ಷಣ’ ಅಳವಡಿಸುವ ನಿಟ್ಟಿನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಠಾಧೀಶರು ನೀಡಿರುವ ಮಾಂಸಾಹಾರದ ಕುರಿತಾದ ಸಲಹೆ ರಾಜ್ಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 

'ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು, ಮಾಂಸ ನೇತು ಹಾಕುವುದು ನಿಲ್ಲಲಿ, ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕಾಗಿದೆ' ಎಂಬ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಸಲಹೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 

ಪೇಜಾವರ ಮಠದ ಸ್ವಾಮೀಜಿ ಹೇಳಿದ್ದೇನು?: 'ಮಾಂಸ ನೇತು ಹಾಕುವುದು ನಿಲ್ಲಲಿ, ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕಾಗಿದೆ. ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು ಮತ್ತು ಮಾಂಸವನ್ನು ಅಂಗಡಿಗಳ ಮುಂದೆ ನೇತುಹಾಕುವುದನ್ನು ಸ್ಥಗಿತಗೊಳಿಸಬೇಕು ಅಥವಾ ಇದನ್ನು ಮರೆಮಾಚಬೇಕು' ಎಂದು ಸಲಹೆ ನೀಡಿದ್ದರು. 

ಅಲ್ಲದೇ, ಸಭೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ''ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧವಿದೆ.  ಕೆಲವು ಆಹಾರಗಳು ಮಕ್ಕಳಲ್ಲಿ ನಕರಾತ್ಮಕ ಮನೋಭಾವ ಬೆಳೆಸುತ್ತವೆ. ಹಾಗಾಗಿ ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು ಮತ್ತು ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು'' ಎಂದು ಸಲಹೆ ನೀಡಿದ್ದರು. 

► ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ: 

ಈ ವಿಚಾರವಾಗಿ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಅವರು, ' ಮೌಲಿಕ ಶಿಕ್ಷಣದ ಬಗ್ಗೆ ಶೈಕ್ಷಣಿಕ ತಜ್ಞರ ಸಲಹೆ ಪಡೆಯಬೇಕಿದ್ದ ಸರ್ಕಾರವು ಮಠಾಧೀಶರ ಸಲಹೆಗಳನ್ನು ಪಡೆಯುತ್ತಿರುವುದು ಹಾಸ್ಯಾಸ್ಪದ ಇದರಲ್ಲಿ ಪೇಜಾವರ ಮಠದ ಸ್ವಾಮೀಜಿಯು ಮಾಂಸಹಾರದ ಬಗ್ಗೆ ಅಸಹನೆ ತೋರುವುದನ್ನೇ ಮೌಲ್ಯ ಎಂದಿದ್ದರೆ ಇನ್ನೊಬ್ಬ ಮಹಾಶಯರು ಪುನರ್ಜನ್ಮದ ಬಗ್ಗೆ ತಿಳಿಸಿಕೊಡಿ ಎಂದು ಹೇಳಿರುತ್ತಾರೆ ಇವು ಮೌಲಿಕ ಶಿಕ್ಷಣದ ಸಲಹೆಗಳೇ?' ಎಂದು ಪ್ರಶ್ನೆ ಮಾಡಿದ್ದಾರೆ. 

'ಉಡುಪಿ ಮಠದಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತಿದ್ದ ಬಂಟ ಮಹಿಳೆಯನ್ನು ಊಟದಿಂದ ಎಬ್ಬಿಸಿ ಅವಮಾನಿಸಿ ಹೊರದಬ್ಬಲಾಯಿತು. ಈ ರೀತಿ ಮಹಿಳೆಯನ್ನು ಊಟದಿಂದ ಎಬ್ಬಿಸಿದ ಕ್ರೂರಿ ಯಾವ ಆಹಾರ ತಿನ್ನುತ್ತಾನೆ ? ಸಾತ್ವಿಕವೋ ಮಾಂಸಾಹಾರವೋ ?  ನಿರಂಜನ ಭಟ್ಟ ಎಂಬಾತ ಭಾಸ್ಕರ ಶೆಟ್ಟಿ ಎಂಬವರನ್ನು ಹಣಕ್ಕಾಗಿ ಕೊಂದು ತುಂಡು ತುಂಡು ಮಾಡಿ ಹೋಮುಕುಂಡದಲ್ಲಿ ಸುಟ್ಟು ಹಾಕಿ ಈಗ ಜೈಲಲ್ಲಿದ್ದಾನೆ. ಆತ ಮಾಂಸ ನೇತಾಡಿಸುವ ಅಂಗಡಿ ಇಟ್ಟುಕೊಂಡಿದ್ದನೇ ?  ಶಿರೂರು ಸ್ವಾಮಿಗಳು ಬದುಕಿದ್ದಾಗ ಒಂದೊಂದು ಮಠದ ಒಂದೊಂದು ಕರ್ಮಕಾಂಡವನ್ನೂ ಎಳೆಎಳೆಯಾಗಿ ಹೇಳುತ್ತಿದ್ದರು. ಮಹಿಳೆಯರ ಮೇಲೆ ದೌರ್ಜನ್ಯ, ಗರ್ಭಪಾತ, ಕೊಲೆ, ಅಧಿಕಾರ ದುರುಪಯೋಗ ನಡೆಸಿದ್ದ ಸ್ವಾಮಿಗಳ ಆಹಾರ ಯಾವುದಾಗಿತ್ತು ?' ಎಂದು ಪತ್ರಕರ್ತ ನವೀನ್ ಸೂರಿಂಜೆ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

ಮಾಂಸದ ಅಂಗಡಿ ಮುಂದೆ ಮಾಂಸ ನೋಡಿದ್ರೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಆದ್ರೆ ಮಠಗಳಲ್ಲಿ ನೀವು ಮಾಡೋ ಪಂಕ್ತಿ ಭೇದ, ಜಾತಿ ಭೇದ ಮಾಡೋದ್ರಿಂದ ಮಕ್ಕಳ ಮನಸ್ಸಿನ ಮೇಲೆ ಯಾವ ಕೆಟ್ಟ ಪರಿಣಾಮ ಬೀರಲ್ಲ ಅಲ್ವಾ ಸ್ವಾಮ್ಗಳೇ? ಎಂದು ನೆಟ್ಟಿಗರೊಬ್ಬರು ಬರೆದು

Full View Full View Full View

Similar News