×
Ad

ವಿವಾದಗಳಿಗೆ ಕಾರಣರಾದ ಬಿ.ಸಿ.ನಾಗೇಶ್‍ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ: ಸಾಹಿತಿಗಳಿಂದ ಒಕ್ಕೊರಲಿನ ಆಗ್ರಹ

ಮಠಾಧೀಶರಿಂದ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವ ಸಲಹೆ ಪಡೆದ ವಿಚಾರ

Update: 2023-01-10 20:51 IST

ಬೆಂಗಳೂರು, ಜ.10:ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಿಕೊಳ್ಳಬೇಕು ಎಂಬುದು ಸೇರಿದಂತೆಹಲವು ಸಲಹೆಗಳನ್ನು ದುಂಡು ಮೇಜಿನ ಸಭೆಯಲ್ಲಿ ಮಠಾಧೀಶರು ನೀಡಿದ್ದು, ಇಂಥ ಸಲಹೆಗಳನ್ನು ಪಡೆದು ವಿವಾದಗಳಿಗೆ ಕಾರಣರಾದ ಬಿ.ಸಿ.ನಾಗೇಶ್‍ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ,  ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ರಾಮಕೃಷ್ಣ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸೇರಿ ಮತ್ತಿತರ ಸಾಹಿತಿಗಳು (ಕರ್ನಾಟಕ ಜಾಗೃತ ನಾಗರಿಕರು) ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.   

ಶಾಲೆಗಳಲ್ಲಿ ಸಾತ್ವಿಕ ಆಹಾರ ಕೊಡಬೇಕು, ಅಂಗಡಿಗಳಲ್ಲಿ ಮಾಂಸ ನೇತು ಹಾಕುವುದನ್ನು ನಿಲ್ಲಿಸಬೇಕು, ಪುನರ್ಜನ್ಮದ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂಬ ಮಠಾಧೀಶರ ಸಲಹೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಾಹಿತಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

'ಮೌಲ್ಯ ಶಿಕ್ಷಣ' ಎಂದರೆ ಏನು? ಈ ಪರಿಕಲ್ಪನೆಯನ್ನು ಯಾರು ತೇಲಿಬಿಟ್ಟರು? ಯಾವುದು ಮೌಲ್ಯ ಎನ್ನುವುದನ್ನು  ನಿರ್ಧರಿಸಲು ಸಾಧ್ಯವಿಲ್ಲ. ಆರೆಸ್ಸೆಸ್‍ನ ಚಾತುರ್ವರ್ಣ ಸಿದ್ಧಾಂತವನ್ನು, ಪ್ರಾಚೀನ ಗುರುಕುಲ ಪದ್ಧತಿಯನ್ನು, ಬ್ರಾಹ್ಮಣೀಕರಣದ ವ್ಯವಸ್ಥೆಯನ್ನು ಮೌಲ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನ ವಿರೋಧಿ ಎಂದು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇವೆ.ಆದರೆ, ಪರಿಣಿತರು, ಶಿಕ್ಷಣ ತಜ್ಞರು ವಿವರಿಸಿದಂತೆ ಮಕ್ಕಳಿಗೆ ಮೌಲ್ಯ ಶಿಕ್ಷಣಕ್ಕಿಂತಲೂ 'ವಿಮರ್ಶಾತ್ಮಕ ಶಿಕ್ಷಣದ' ಅಗತ್ಯವಿದೆ.ಈ ಕುರಿತು ವಿಷಯ ಪರಿಣಿತರೊಂದಿಗೆ ಸಮಾಲೋಚನೆ, ಸಂವಾದ ನಡೆಸಬೇಕುಎಂದುಕರ್ನಾಟಕಜಾಗೃತ ನಾಗರಿಕರು ಒತ್ತಾಯಿಸಿದ್ದಾರೆ.

ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ, ಅವೈಜ್ಞಾನಿಕ ಸಲಹೆಗೆ ಯಾವುದೇಅರ್ಥವಿಲ್ಲ.  ಕೆಲವೇ ತಿಂಗಳುಗಳಲ್ಲಿ ಚುನಾವಣೆಯೂ ಬರುತ್ತಿರುವಾಗಇಂತಹಒಂದು ಸಭೆ ನಡೆಸಿಮಕ್ಕಳ ಭವಿಷ್ಯದೊಂದಿಗೆಆಟವಾಡುವಔಚಿತ್ಯವೇನಿದೆ? ಇದುತಪ್ಪು.ಈ ಎಲ್ಲ ವಿವಾದಗಳಿಗೆ ಕಾರಣರಾದ  ಶಿಕ್ಷಣಸಚಿವ ಬಿ.ಸಿ.ನಾಗೇಶ್ ಅವರನ್ನು ವಜಾಗೊಳಿಸಿ ಎಂದು ಡಾ.ವಿಜಯಾ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್,  ವಿಮಲಾ. ಕೆ.ಎಸ್.,  ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ,  ಡಾ.ಪ್ರಭುಖಾನಾಪುರೆ,  ಟಿ.ಸುರೇಂದ್ರರಾವ್,  ಎನ್.ಕೆ.ವಸಂತ್‍ರಾಜ್, ಡಾ.ವಸುಂಧರಾ ಭೂಪತಿ, ಡಾ.ಎನ್.ಗಾಯತ್ರಿ, ಸಿ.ಕೆ.ಗುಂಡಣ್ಣ,  ಡಾ.ಲೀಲಾ ಸಂಪಿಗೆ ಅವರು ಈ ಮೂಲಕ ಒತ್ತಾಯಿಸಿದ್ದಾರೆ.'

ಇದನ್ನೂ ಓದಿ: 'ಮಾಂಸ ನೇತು ಹಾಕುವುದು ನಿಲ್ಲಲಿ': ಮಠಾಧೀಶರ ಸಲಹೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

Similar News