×
Ad

ಗೃಹ ಇಲಾಖೆಯೇ ಸಾಂಟ್ರೊ ರವಿಯ ಕೈಯೊಳಗಿದೆ: ಕಾಂಗ್ರೆಸ್ ಟೀಕೆ

Update: 2023-01-11 11:12 IST

ಬೆಂಗಳೂರು: ಪೊಲೀಸರು ಸಾಂಟ್ರೊ ರವಿಯನ್ನು ಇನ್ನೂ ಬಂಧಿಸಿಲ್ಲ. ಗೃಹ ಇಲಾಖೆಯೇ ಆತನ ಕೈಯೊಳಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಹುತೇಕ ಪೊಲೀಸರು ಆತನ ವರ್ಗಾವಣೆ ಋಣದಲ್ಲಿದ್ದಾರೆ. ಸಿಎಂ, ಸಿಎಂ ಪುತ್ರ, ಗೃಹಸಚಿವರೇ ಆತನ ಜೇಬಲ್ಲಿದ್ದಾರೆ. ಆತನನ್ನು ಇನ್ನೂ ಬಂಧಿಸಲಾಗಿಲ್ಲ. ಸಿಎಂಗಿಂತಲೂ ಪ್ರಭಾವಿಯಾದವನ ತನಿಖೆ ಪೊಲೀಸರಿಂದ ಸಾಧ್ಯವೇ? ಎಂದು ಪ್ರಶ್ನಿಸಿದೆ.

Similar News