×
Ad

ತೀರ್ಥಹಳ್ಳಿ: ಕಾಂಗ್ರೆಸ್ ಕಚೇರಿ ಸಹಿತ ವಿವಿಧ ಸ್ಥಳಗಳಲ್ಲಿ ಈ.ಡಿ. ತಂಡದಿಂದ ಪರಿಶೀಲನೆ

Update: 2023-01-11 12:10 IST

ಶಿವಮೊಗ್ಗ: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ಅಜ್ಜಿಯ ಮನೆ ಹಾಗೂ ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಗೆ ಈ.ಡಿ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ  ಪಟ್ಟಣದ ಸೊಪ್ಪುಗುಡ್ಡೆಯ ಶಾರಿಕ್ ಅಜ್ಜಿಯ ಮನೆಗೆ  ಈ.ಡಿ. ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ  ಕಾಂಗ್ರೆಸ್​ ಕಚೇರಿಗೆ ಈ.ಡಿ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು  ಮೂಲಗಳು ತಿಳಿಸಿವೆ.

ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿ ಶಾರಿಕ್​ನ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್​ ಕಚೇರಿಯನ್ನು ತೆರೆಯಲಾಗಿತ್ತು. ಈ ಸಂಬಂಧ ಅಗ್ರಿಮೆಂಟ್​ ಮಾಡಿಕೊಳ್ಳಲಾಗಿತ್ತು. ಈ ಅಗ್ರಿಮೆಂಟ್​ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ರವರ ಸಂಬಂಧಿ ಹೆಸರಲ್ಲಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಶಾರಿಕ್ ಗೆ ಸೇರಿದ ಹಣದ ಮೂಲ ಮತ್ತು ಆಸ್ತಿ ಮೂಲದ ವಿಚಾರವಾಗಿ ತೀರ್ಥಹಳ್ಳಿಗೆ ಭೇಟಿ ಕೊಟ್ಟಿರುವ ಈ.ಡಿ. ಅಧಿಕಾರಿಗಳು, ಕಾಂಗ್ರೆಸ್​ ಕಚೇರಿಯಲ್ಲಿಯು ದಾಖಲಾತಿಯ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶಾರೀಕ್​ನ ಅಜ್ಜಿಯನ್ನು ಈ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News