ಕರ್ನಾಟಕ ಹೈಕೋರ್ಟ್ ಗೆ ಇಬ್ಬರು ನ್ಯಾಯಾಧೀಶರ ಹೆಸರು ಶಿಫಾರಸ್ಸು

Update: 2023-01-11 14:36 GMT

ಬೆಂಗಳೂರು, ಜ.11: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ರಾಮಚಂದ್ರ ಹುದ್ದಾರ, ವೆಂಕಟೇಶ್ ನಾಯಕ್ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ರಾಮಚಂದ್ರ ಡಿ. ಹುದ್ದಾರ ಅವರು ಸದ್ಯ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾಗಿದ್ದರೆ,  ಟಿ.ವೆಂಕಟೇಶ ನಾಯಕ್ ಅವರು ಬೆಂ. ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದಾರೆ. ಈ ಇಬ್ಬರು ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಶಿಫಾರಸುಗೊಂಡ ನ್ಯಾಯಾಧೀಶರು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕಗೊಂಡಲ್ಲಿ ಹೆಚ್ಚುವರಿ ನ್ಯಾಯಮೂರ್ತಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಎರಡು ವರ್ಷದ ನ್ಯಾಯಪೀಠದ ಕರ್ತವ್ಯ ನಿರ್ವಹಣೆಯ ಆಧಾರದಲ್ಲಿ ಅವರ ನ್ಯಾಯಮೂರ್ತಿ ಹುದ್ದೆಯನ್ನು ಖಾಯಂಗೊಳಿಸಲಾಗುತ್ತದೆ. 

Similar News