×
Ad

'ರೌಡಿ ಮೋರ್ಚಾದಲ್ಲೂ ಕುಟುಂಬ ರಾಜಕೀಯ': ಸಚಿವ ಕಾರಜೋಳ ಪುತ್ರನದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

Update: 2023-01-11 23:55 IST

ಬೆಂಗಳೂರು: ವಿಜಯಪುರ ಜಿಲ್ಲಾ ಎಸ್​ಸಿ ಮೊರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಖಣಾಪುರ ಹಾಗೂ ಆತನ‌ ಸಹೋದರನಿಗೆ ಬೆದರಿಕೆ ಹಾಕುತ್ತಿರುವ  ಸಚಿವ ಗೋವಿಂದ ಕಾರಜೋಳ ಪುತ್ರನದ್ದು ಎನ್ನಲಾದ ಆಡಿಯೋ ಒಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. 

ಬುಧವಾರ ಟ್ವಿಟರ್ ನಲ್ಲಿ 1:24 ನಿಮಿಷಗಳ ಆಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್,  ರೌಡಿ ಮೋರ್ಚಾದಲ್ಲೂ ಬಿಜೆಪಿಯ ಕುಟುಂಬ ರಾಜಕೀಯ ಜೋರಾಗಿದೆ ಎಂದು ಬಿಜೆಪಿಯನ್ನು ಕುಟುಕಿದೆ.  

''ನಳಿನ್ ಕುಮಾರ್ ಕಟೀಲ್ ಅವರೇ, ಅಂಗೈಯಲ್ಲಿ ತುಪ್ಪ ಹಿಡಿದು ಊರೆಲ್ಲ ಏಕೆ ಹುಡುಕುವಿರಿ, ಸೈಲೆಂಟ್ ಆಗಿ ಸಚಿವ ಗೋವಿಂದ್ ಕಾರಜೋಳರ ಪುತ್ರನಿಗೆ ರೌಡಿ ಮೋರ್ಚಾದ ನೇತೃತ್ವ ಕೊಟ್ಟುಬಿಡಿ! ಕುಟುಂಬ ರಾಜಕೀಯದ ಬಿಜೆಪಿಗೆ ಕಾರ್ಯಕರ್ತರು ಮುಖ್ಯವಲ್ಲ, ನಾಯಕರ ಕುಟುಂಬವೇ ಮುಖ್ಯ ಎಂಬುದು ಸಾಬೀತಾಗಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ಕಾಂಗ್ರಸ್ ತರಾಟೆಗೆ ತೆಗೆದುಕೊಂಡಿದೆ.  

Similar News