ನಾನು ಕಾಂಗ್ರೆಸ್ ಸೇರುವುದು ಖಚಿತ: ಎಚ್.ವಿಶ್ವನಾಥ್
Update: 2023-01-12 00:05 IST
ರಾಯಚೂರು: 'ನನ್ನ ರಕ್ತನೇ ಕಾಂಗ್ರೆಸ್ , ನಾನು ಕಾಂಗ್ರೆಸ್ ಸೇರುವುದು ಖಚಿತ' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಬೆಳೆದವರು. ರಾಜಕಾರಣ ಎನ್ನುವುದು ಒಂದು ಕುಟುಂಬದ ಜಗಳವಿದ್ದಂತೆ. ಕೋಲಾರದ ಜನರ ಪ್ರೀತಿ, ವಿಶ್ವಾಸದಿಂದಾಗಿ ಸಿದ್ದರಾಮಯ್ಯನವರು ಅಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರರ ತೀರ್ಮಾನವೇ ಅಂತಿಮ' ಎಂದು ಹೇಳಿದರು.
'ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೆ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ' ಎಂದು ಕಿಡಿಕಾರಿದರು.