ಹೊಸಪೇಟೆ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು; 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು

Update: 2023-01-11 18:57 GMT

ಹೊಸಪೇಟೆ: ಕಲುಷಿತ ನೀರು ಕುಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಣಿಪೇಟೆ ಬಳಿ ಮಂಗಳವಾರ ವರದಿಯಾಗಿದೆ.

ಇಲ್ಲಿನ ರಾಣಿಪೇಟೆಯ 12ನೇ ಕ್ರಾಸ್‌ ನಿವಾಸಿ ಲಕ್ಷ್ಮೀದೇವಿ (50) ಮೃತ ಮಹಿಳೆಯಾಗಿದ್ದು, ಅವರ ಮನೆಯ 11 ತಿಂಗಳ ಮಗು, ಇನ್ನೊಬ್ಬರು ಕೂಡ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. 

ಇನ್ನು ಕಲುಷಿತ ನೀರು ಸೇವಿಸಿದ 50ಕ್ಕೂ ಹೆಚ್ಚಿನ ಜನರು ಅನಾರೋಗ್ಯಕ್ಕೀಡಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಮನೆ ಮನೆಗೆ ಭೇಟಿ, ಆರೋಗ್ಯ ತಪಾಸಣೆ: 

ಹೊಸಪೇಟೆ ಸುತ್ತಮುತ್ತ ಆರೋಗ್ಯಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. 

Similar News