'ಯುವಜನೋತ್ಸವ' ಕಾರ್ಯಕ್ರಮದ ಅಹ್ವಾನ ಪತ್ರಿಕೆಯಲ್ಲಿಲ್ಲ ಜಗದೀಶ್ ಶೆಟ್ಟರ್ ಹೆಸರು: ಸಚಿವ ಜೋಶಿ ಪ್ರತಿಕ್ರಿಯೆ

Update: 2023-01-12 05:52 GMT

ಹುಬ್ಬಳ್ಳಿ: 'ರಾಷ್ಟ್ರೀಯ ಯುವಜನೋತ್ಸವಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮೋದಿ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ನೋಂದಣಿಯಾಗಿದೆ. ಯಾರೇ ಬಂದರೂ ಒಳಗೆ ಬಿಡುವುದಕ್ಕೆ ಹೇಳಿದ್ದೇನೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇದು ಅಖಿಲ ಭಾರತ ಮಟ್ಟದ ಕಾರ್ಯಕ್ರಮ. ಎಲ್ಲ ಮಂತ್ರಿಗಳ ಹೆಸರು ಹಾಕಲಾಗಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿತ್ತು. ಗಮನಕ್ಕೆ ಬಂದ ಕೂಡಲೇ ಅದನ್ನ ಸರಿ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಉದ್ದೇಶಪೂರ್ವಕವಾಗಿ ಬಿಡಲಾಗಿಲ್ಲ. ಶೆಟ್ಟರ್ ಜೊತೆ ಬೇರೆ ಶಾಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ತಡೆಸಕರಿಗೂ ವೇದಿಕೆಯಲ್ಲಿ ಅವಕಾಶ ಇರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇನ್ನು ಜಿಮ್ ಖಾನಾ ಕ್ಲಬ್ ನಲ್ಲಿ ಎಲ್.ಇ.ಡಿ ವ್ಯವಸ್ಥೆ ಮಾಡಲಾಗಿದೆ. ನ ಭೂತೋ ನ ಭವಿಷ್ಯತಿ ಅನ್ನೋ ರೀತಿಯಲ್ಲಿ ವ್ಯವಸ್ಥೆಯಾಗಿದೆ. ಲಕ್ಷಾಂತರ ಜನ ಬರುತ್ತಿದ್ದಾರೆ. ಪ್ರಧಾನಿಗಳು ಬರುತ್ತಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ ಎಂದರು.

ರೋಡ್ ಶೋ ಮಾಡುತ್ತಿಲ್ಲ, ದಾರಿಯಲ್ಲಿ ಮೋದಿ ಜನರನ್ನ ಭೇಟಿಯಾಗುತ್ತಾರೆ. ಪ್ರತಿ ಕಿಲೋ ಮೀಟರ್ ಗೆ ಒಂದು ಕಡೆ ಮೋದಿ ಜನರನ್ನು ಭೇಟಿಯಾಗ್ತಾರೆ. ಒಟ್ಟು ಎಂಟು ಕಡೆ ಜನರನ್ನು ಮೋದಿ ಭೇಟಿ ಆಗುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ತಡೆ

Similar News