ಚಾಮರಾಜನಗರ: ಬೆಳೆ ಉಳಿಸಿಕೊಳ್ಳಲು ನಾಯಿಗೆ ಹುಲಿ ವೇಷ ಹಾಕಿದ ರೈತ

Update: 2023-01-12 06:01 GMT

ಹನೂರು, ಜ.12: ರಾತ್ರಿ ವೇಳೆ ಕಾಡು ಹಂದಿ, ಕೋತಿಗಳು ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದು, ಹೀಗಾಗಿ ಬೆಳೆಗಳನ್ನು ರಕ್ಷಿಸಲು ಹನೂರು ತಾಲೂಕಿನ ಅಜ್ಜೀಪುರದ ರೈತನೋರ್ವ ನಾಯಿಗೆ ಹುಲಿಯ ಬಣ್ಣ ಬಳಿದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಕಾಡಂಚಿನ ಗ್ರಾಮದ ಅಜ್ಜೀಪುರದ ರೈತ ಮಂಜು ಈ ವಿನೂತನ ಉಪಾಯವನ್ನು ಕಂಡು ಕೊಂಡಿದ್ದು, ತನ್ನ ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ಕೋತಿಗಳನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸದ್ಯ  ಹುಲಿ ವೇಷಧಾರಿ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಜ್ಜೀಪುರ - ಹನೂರು ನಡುವೆ ರಸ್ತೆಯಲ್ಲಿ  ಓಡಾಡುತ್ತಿರುವ ಈ ನಾಯಿಯನ್ನು ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ನಿಜಾಂಶ ಗೊತ್ತಾದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

Similar News