ಹುಬ್ಬಳ್ಳಿಯ ಪ್ರಧಾನಿ ರೋಡ್‌ಶೋನಲ್ಲಿ ಭದ್ರತಾ ಲೋಪ !

ವೀಡಿಯೊ ವೀಕ್ಷಿಸಿ

Update: 2023-01-12 15:47 GMT

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಗೆಂದು ಹುಬ್ಬಳ್ಳಿಗೆ ಆಗಮಿಸಿದ್ದು, ಅವರು ರೋಡ್‌ಶೋ ನಡೆಸುವ ವೇಳೆ ಬಾಲಕನೋರ್ವ ಅಡ್ಡಗಟ್ಟಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. 

ಹುಬ್ಬಳ್ಳಿ ಏರ್​ಪೋರ್ಟ್​ನಿಂದ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಯುತ್ತಿರುವ ರೈಲ್ವೆ ಮೈದಾನದತ್ತ ರೋಡ್ ಶೋ ನಡೆಸುವ ವೇಳೆ ರಸ್ತೆ ಮಧ್ಯೆ ಬಾಲಕನೊಬ್ಬ ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಡ್ ದಾಟಿ ಕಾರಿನ ಬಳಿ ಹೋಗಿದ್ದಾನೆ. ಈ ವೇಳೆ ಬಾಲಕನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.

Similar News