×
Ad

2023ರ ಈ ಹೊತ್ತಿಗೆ ಕಥಾ, ಕಾವ್ಯ ಪ್ರಶಸ್ತಿಗಳ ಫಲಿತಾಂಶ ಪ್ರಕಟ

Update: 2023-01-12 18:11 IST

ಬೆಂಗಳೂರು, ಜ.11: ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪುಕೊಟ್ಟಿರುವ ಈ ಹೊತ್ತಿಗೆ ಟ್ರಸ್ಟ್ ಕಥಾ ಹಾಗೂ ಕಾವ್ಯ ಪ್ರಶಸ್ತಿಗಾಗಿ ಅರ್ಜಿ ಕರೆದಿದ್ದ ಅಪ್ರಕಟಿತ ಕಥಾ, ಕವನ ಸಂಕಲನಗಳ ಫಲಿತಾಂಶವು ಬುಧವಾರ ಪ್ರಕಟವಾಗಿದೆ.

ಕಥೆಗಾರ ವಿನಾಯಕ ಅರಳ ಸುರಳಿ 2023ರ ಈ ಹೊತ್ತಿಗೆ ಕಥಾ ಪ್ರಶಸ್ತಿ ಹಾಗೂ ಯುವ ಬರಹಗಾರ ಚಾಂದ್ ಪಾಷಾ ಎನ್.ಎಸ್. ಈ ಹೊತ್ತಿಗೆ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಎರಡೂ ಪ್ರಶಸ್ತಿಗಳು ತಲಾ ರೂ. 10 ಸಾವಿರ ರೂ.ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಕಥಾ ವಿಭಾಗದ ತೀರ್ಪುಗಾರರಾಗಿ ಖ್ಯಾತ ವಿಮರ್ಶಕ ಡಾ. ಎಸ್.ಆರ್ ವಿಜಯ ಶಂಕರ, ಕಾವ್ಯ ವಿಭಾಗದ ತೀರ್ಪುರಗಾರರಾಗಿ ಖ್ಯಾತ ಕವಿ ಡಾ.ಕೆ ವೈ.ನಾರಾಯಣ ಸ್ವಾಮಿ ಕಾರ್ಯನಿರ್ವಹಿಸಿದ್ದಾರೆ. ಮಾರ್ಚ್ ನಲ್ಲಿ ಜೆ.ಪಿ.ನಗರದ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟನೆ ತಿಳಿಸಿದೆ.

Similar News