ಹುಬ್ಬಳ್ಳಿ: ಮೋದಿ ರೋಡ್ ಶೋ ವೇಳೆ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದು ಭದ್ರತಾ ವೈಫಲ್ಯವಲ್ಲ ಎಂದ ಕಮಿಷನರ್ ಗುಪ್ತಾ
Update: 2023-01-12 22:31 IST
ಹುಬ್ಬಳ್ಳಿ, ಜ.12: ರೋಡ್ ಶೋ ವೇಳೆ ನರೇಂದ್ರ ಮೋದಿ ಹೂಮಾಲೆ ಹಾಕಲು ಬಾಲಕನಿಂದ ಯತ್ನ ಪ್ರಕರಣ ಇದು ಭದ್ರತಾ ಲೋಪ ಅಲ್ಲ. ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿದರು.
ಬಾಲಕನೊಬ್ಬ ಬ್ಯಾರಿಕೇಡ್ ಹಾರಿ ಮೋದಿಯವರಿಗೆ ಮಾಲೆ ಹಾಕಲು ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬ್ಯಾರಿಕೇಡ್ ಹಾರಿ ಬಂದ ಬಾಲಕನನ್ನು ನಮ್ಮ ಭದ್ರತಾ ಸಿಬ್ಬಂದಿ ತಕ್ಷಣವೇ ತಡೆದಿದ್ದಾರೆ. ಅತಿ ಉತ್ಸಾಹದಿಂದ ಬಾಲಕ ಈ ರೀತಿ ಮಾಡಿದ್ದಾನೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದರು.
ಇನ್ನೂ ವಿಚಾರಣೆ ಬಳಿಕ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವೆ. ಈ ಪ್ರಕರಣ ಕುಲಂಕೂಷವಾಗಿ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.