×
Ad

ಕರ್ತವ್ಯ ಲೋಪ: ಸಕಲೇಶಪುರ ಆರ್ ಎಫ್ಒ ಅಮಾನತು

Update: 2023-01-12 22:47 IST

ಹಾಸನ: ಸಕಲೇಶಪುರ ಅರಣ್ಯಾಧಿಕಾರಿ ಎಸ್ಎಲ್ ಶಿಲ್ಪಾ ಅವರನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಬೆಂಗಳೂರಿನಲ್ಲಿರುವ ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಅಮಾನತು ಆದೇಶವನ್ನು ಪ್ರಕಟಿಸಿದ್ದಾರೆ. ಅರಣ್ಯದಲ್ಲಿ ನಡೆಯುತ್ತಿರುವ ಕಳ್ಳತನವನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಅಮಾನತುಗೊಳಿಸಲಾಗಿದೆ.

ಅಲ್ಲದೆ, ಅರಣ್ಯ ಅಪರಾಧ ಪ್ರಕರಣಗಳ ತನಿಖೆ ನಡೆಸುವಲ್ಲಿ ವಿಫಲತೆ, ಅವರಿಗೆ ನೀಡಿದ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ವಿಫಲತೆ, ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿಕೊಂಡು ಆನೆ- ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲತೆ ಮೊದಲಾದ ಆರೋಪಗಳನ್ನು ಎಸ್ಎಲ್ ಶಿಲ್ಪಾ ಅವರ ವಿರುದ್ಧ ಹೊರಿಸಲಾಗಿದೆ. 

Similar News